ಪ್ರಧಾನಿ ಮೋದಿಯನ್ನು ಭೇಟಿಯಾದ ಕೆಸಿಆರ್
Update: 2018-12-26 21:53 IST
ಹೊಸದಿಲ್ಲಿ, ಡಿ.26: ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಹಾಗು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ತೆಲಂಗಾಣ ಚುನಾವಣೆಯಲ್ಲಿ ಕೆಸಿಆರ್ ಪಕ್ಷ ಭರ್ಜರಿ ಜಯ ಗಳಿಸಿದ ನಂತರ ಇದು ಪ್ರಧಾನಿಯೊಂದಿಗೆ ಅವರ ಮೊದಲ ಭೇಟಿಯಾಗಿದೆ.
10 ಹಿಂದುಳಿದ ಜಿಲ್ಲೆಗಳಿಗೆ ಅನುದಾನ ಬಿಡುಗಡೆ, ತೆಲಂಗಾಣಕ್ಕೆ ಪ್ರತ್ಯೇಕ ಹೈಕೋರ್ಟ್ ಸ್ಥಾಪನೆ, ಹೊಸ ಜಿಲ್ಲೆಗಳಲ್ಲಿ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಈ ಸಂದರ್ಭ ಪ್ರಧಾನಿಯೊಂದಿಗೆ ಚರ್ಚೆ ನಡೆಸಿದರು.
ನಿನ್ನೆಯಷ್ಟೇ ಕೆಸಿಆರ್ ನವೀನ್ ಪಟ್ನಾಯಕ್ ಹಾಗು ರವಿವಾರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರನ್ನು ಕೆಸಿಆರ್ ಭೇಟಿಯಾಗಿದ್ದರು.