×
Ad

ನೇಣು ಬಿಗಿದು ಆತ್ಮಹತ್ಯೆ

Update: 2018-12-26 22:27 IST

ಕಾರ್ಕಳ, ಡಿ.26: ತಂಗಿಯ ಮಗಳ ಮದುವೆಗೆಂದು ಮುಂಬೈಯಿಂದ ಊರಿಗೆ ಬಂದ ರಾಘು ಶೆಟ್ಟಿ (75) ಎಂಬವರು ತಾನು ಉಳಿದುಕೊಂಡಿದ್ದ ಕಾರ್ಕಳ ತಾಲೂಕು ನೆಲ್ಲೂರು ಗ್ರಾಮದ ಬಿಚ್ಚನ್‌ಬೆಟ್ಟು ಮನೆಯಲ್ಲಿ ಡಿ. 24ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನಗಿರುವ ಕಾಯಿಲೆಯಿಂದ ಬೇಸತ್ತು ಅವರು ಈ ಕೃತ್ಯ ಎಸಗಿರಬೇಕೆಂದು ಹೇಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News