ರಾಕೆಟ್ ಲಾಂಚರ್ ಎಂದು ಟ್ರ್ಯಾಕ್ಟರ್ ನ ಭಾಗವನ್ನು ವಶಪಡಿಸಿಕೊಂಡಿತೇ ಎನ್ ಐಎ?

Update: 2018-12-27 11:16 GMT

ಹೊಸದಿಲ್ಲಿ, ಡಿ.27: ಬುಧವಾರ ದಿಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ನಡೆಸಲಾದ ಹಲವು ದಾಳಿಗಳ ವೇಳೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ ಐಎ) ರಾಕೆಟ್ ಲಾಂಚರ್ ಗಳು ಎಂದು ಟ್ರ್ಯಾಕ್ಟರ್ ನ ಭಾಗವೊಂದನ್ನು ವಶಪಡಿಸಿಕೊಂಡಿದೆ ಎಂದು jantakareporter.com ವರದಿ ಮಾಡಿದೆ.

“ಅವರು  ನಮ್ಮ ಟ್ರ್ಯಾಕ್ಟರ್ ಟ್ರಾಲಿಯ ಪ್ರೆಶರ್ ನಾಝಲ್ (ಕೊಳವೆ) ವಶಪಡಿಸಿಕೊಂಡು ಅದನ್ನು ರಾಕೆಟ್ ಲಾಂಚರ್ ವಶಪಡಿಸಿಕೊಂಡಿದ್ದಾರೆಂದು ಹೇಳುತ್ತಿದ್ದಾರೆ. ಅವರು ನನ್ನ ಪುತ್ರರನ್ನೂ  ಬಂಧಿಸಿದ್ದಾರೆ'' ಎಂದು ಎನ್‍ಐಎ ಬಂಧಿಸಿದ ಹತ್ತು ಮಂದಿಯಲ್ಲಿ ಇಬ್ಬರಾದ ಸಯೀದ್  ಹಾಗೂ ರಯೀಸ್ ಅಹ್ಮದ್ ಎಂಬವರ ತಾಯಿ ಪತ್ರಕರ್ತ ಪ್ರಶಾಂತ್ ಕಿಶೋರ್ ಜತೆ ಮಾತನಾಡುತ್ತಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್, “ಹಾಗಾದರೆ ಸುತ್ಲಿ ಬಾಂಬ್ ನಂತರ ಈಗ ಟ್ರ್ಯಾಕ್ಟರ್ ಟ್ರಾಲಿ'' ಎಂದು ಬರೆದಿದ್ದಾರೆ. ಬಂಧಿತ ಯುವಕರ ಸಂಬಂಧಿ ನಫೀಸ್ ಅಹ್ಮದ್ ಟ್ರ್ಯಾಕ್ಟರ್ ಟ್ರಾಲಿಯ ನಾಝಲ್ ಅಥವಾ ಕೊಳವೆ ತೋರಿಸಿ ಟ್ರ್ಯಾಕ್ಟರ್ ಟ್ರಾಲಿಯಿಂದ ಸರಕನ್ನು ಕೆಳಕ್ಕಿಳಿಸುವಾಗ ಅದನ್ನು ಹೇಗೆ ಬಳಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರ ಜಾಲವನ್ನು ಬೇಧಿಸಿ 10 ಮಂದಿಯನ್ನು ಬಂಧಿಸಿದ್ದಾಗಿ ಬುಧವಾರ ಎನ್‍ಐಎ ಹೇಳಿದೆ. ಟ್ರ್ಯಾಕ್ಟರ್ ನ ಭಾಗವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ವರದಿಗಳ ಬಗ್ಗೆ ಎನ್ ಐಎ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News