ಜ. 4ರಿಂದ ಬೆಂಗಳೂರಿನಲ್ಲಿ ಮರ್ಕಝ್ ರಾಷ್ಟ್ರೀಯ ಕಲೋತ್ಸವ
ಬಂಟ್ವಾಳ, ಡಿ. 27: ಭಾರತೀಯ ಯುವ ಪೀಳಿಗೆಯ ಅಭ್ಯುದಯಕ್ಕಾಗಿ ಮರ್ಕಝುಸ್ಸಖಾಫತಿ ಸ್ಸುನ್ನಿಯ್ಯಾದ ವತಿಯಿಂದ "ಮರ್ಕಝ್ ರಾಷ್ಟ್ರೀಯ ಕಲಾ ಉತ್ಸವ" (ಅವೆನೊಕ್ಸ್-19) ಜ. 4 ಮತ್ತು 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತ ಮರ್ಕಝ್‍ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಧಾರ್ಮಿಕ-ಲೌಕಿಕ ಶಿಕ್ಷಣ ಸಂಸ್ಥೆಗಳಾದ ಮರ್ಕಿನ್ಸ್ ಬೆಂಗಳೂರು, ಮರ್ಕಝುಲ್ ಹಿದಾಯ ಕೊಡಗು, ಅಲ್-ನೂರ್ ಎಜ್ಯುಕೇಶನಲ್ ಸೆಂಟರ್ ಮೈಸೂರು, ಮದೀನತುನ್ನೂರ್ ಪೂನೂರ್ ಕೇರಳ, ಸತಕ್ ಎಜು ಝೋನ್ ಕೀಳಕ್ಕರೆ ತಮಿಳುನಾಡು, ತ್ವೈಬಾ ಗಾರ್ಡನ್ ಆಲ್ವಾರ್ ರಾಜಸ್ಥಾನ, ತೈಬಾ ಗಾರ್ಡನ್ ಪಶ್ಚಿಮ ಬಂಗಾಳ, ತ್ವೈಬಾ ಕಾಲೇಜ್ ಇಂದೋರ್ ಮಧ್ಯ ಪ್ರದೇಶ, ಅಡ್ವಾನ್ಸ್ಡ್ ಇಸ್ಲಾಮಿಕ್ ಇನ್ಸ್ಟಿಟ್ಯೂಟ್ ಗುಜರಾತ್ ಒಳಪಟ್ಟ ವಿವಿಧ ಸಂಸ್ಥೆಗಳ 2,100ರಷ್ಟು ವಿದ್ಯಾರ್ಥಿಗಳು 100ಕ್ಕೂ ಮಿಕ್ಕ ಸ್ಪರ್ಧೆಗಳಲ್ಲಿ ಭಾಗವಹಿಸುವರು ಎಂದು ಅವೆನೊಕ್ಸ್ ಮೀಡಿಯಾ ಕಮಿಟಿಯ ಸದಸ್ಯ ಮುಹಮ್ಮದ್ ರಾಬಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.