ಬಂಟ್ವಾಳ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ: ಭದ್ರಾ ಚಾಲೆಂಜರ್ಸ್ ಚಾಂಪಿಯನ್
ಬಂಟ್ವಾಳ, ಡಿ. 27: ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಆಯೋಜನೆಯಡಿ ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಬಂಟ್ವಾಳದ ಭದ್ರಾ ಚಾಲೆಂಜರ್ಸ್ ತಂಡ ತಾಲೂಕು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ದ್ವಿತೀಯ ಸ್ಥಾನವನ್ನು ಎಲ್‍ವಿಎಸ್‍ಎಸ್ ಜಾರಂದಗುಡ್ಡೆ, ತೃತೀಯ ಸ್ಥಾನವನ್ನು ಶ್ರೀ ಷಣ್ಮುಖ ತಂಡ ಕೋಲ್ಪೆ, ನಾಲ್ಕನೆ ಸ್ಥಾನವನ್ನು ನವಯುಗ ಕುಕ್ಕಾಜೆ ತಂಡ ಪಡೆದುಕೊಂಡಿತು.
ಉತ್ತಮ ದಾಳಿಗಾರರಾಗಿ ಜಾರಂದಗುಡ್ಡೆ ತಂಡದ ರಂಜಿತ್ ಆಯ್ಕೆಯಾಗಿ ಬಹುಮಾನ ಪಡೆದರು. ಭದ್ರಾ ತಂಡದ ಹರ್ಷಿದ್ ಉತ್ತಮ ಹಿಡಿತಗಾರ ಹಾಗೂ ಅದೇ ತಂಡದ ರಹೀಂ ಆಲ್ ರೌಂಡರ್ ಆಗಿ ಹೊರಹೊಮ್ಮಿದರು.
ಈ ಸಂದರ್ಭದಲ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಕಾರ್ಯಾಧ್ಯಕ್ಷ ಪುಷ್ಪರಾಜ ಚೌಟ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಜೊತೆ ಕಾರ್ಯದರ್ಶಿ ಲತೀಫ್ ನೇರಳೆಕಟ್ಟೆ, ಭದ್ರಾ ಚಾಲೆಂಜರ್ಸ್ ತಂಡದ ಮಂಜುನಾಥ ಆಚಾರ್ಯ, ತೀರ್ಪುಗಾರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ತೀರ್ಪುಗಾರರ ಮಂಡಳಿಯ ಸಂಚಾಲಕ ಹಬೀಬ್ ಮಾಣಿ, ಪ್ರಮುಖರಾದ ಹಿಲ್ಡಾ ವೇಗಸ್, ಗೋಪಾಲಕೃಷ್ಣ ತುಂಬೆ ಉಪಸ್ಥಿತರಿದ್ದರು.