×
Ad

ನಿಟ್ಟಡೆಗುತ್ತು ಸುಧಾಕರ ಹೆಗ್ಡೆ ನಿಧನ

Update: 2018-12-27 20:54 IST

ಬಂಟ್ವಾಳ, ಡಿ. 27: ಬಿ.ಸಿ.ರೋಡು ನಿವಾಸಿ, ಭಾರತೀಯ ಜೀವ ವಿಮಾ ನಿಗಮ ಶಾಖೆಯ ನಿವೃತ್ತ ಹಿರಿಯ ಅಭಿವೃದ್ಧಿ  ಅಧಿಕಾರಿ ನಿಟ್ಟಡೆಗುತ್ತು ಸುಧಾಕರ ಹೆಗ್ಡೆ ( ಎನ್.ಎಸ್.ಹೆಗ್ಡೆ) ಇವರು ಗುರುವಾರ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಆರಂಭದಲ್ಲಿ ಮಂಗಳೂರಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ, ಬಂಟ್ವಾಳ ಎಲ್ಲೈಸಿ ಶಾಖೆಯಲ್ಲಿ 25 ವರ್ಷ ಅಭಿವೃದ್ಧಿ ಅಧಿಕಾರಿಯಾಗಿದ್ದರು. ಬಂಟ್ವಾಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಬಿ.ಸಿ.ರೋಡ್ ಯಕ್ಷ ತರಂಗ ಸ್ಥಾಪಕಾಧ್ಯಕ್ಷರಾಗಿ, ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

ಸಿದ್ಧಕಟ್ಟೆ ಮತ್ತು ಮಣಿನಾಲ್ಕೂರು ಕಾಯರ್ಪಲ್ಕೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಸ್ಥಾಪಿಸಿದ್ದರು. ಡಿ. 28ರಂದು ಬೆಳಗ್ಗೆ 10 ಗಂಟೆಗೆ ಬಿ.ಸಿ.ರೋಡು ಸ್ವಗೃಹದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮೃತ ದೇಹ ಇರಿಸಿದ ಬಳಿಕ ಹುಟ್ಟೂರು ನಿಟ್ಟಡೆಗುತ್ತು ಮನೆ ಬಳಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News