ಮಾಜಿ ಸೈನಿಕರಿಗೆ ರಕ್ಷಣಾ ಪಿಂಚಣಿ ಅದಾಲತ್
ಉಡುಪಿ, ಡಿ. 27: ರಕ್ಷಣಾ ಲೆಕ್ಕ ಪರಿಶೋಧನ ಪ್ರಧಾನ ನಿಯಂತ್ರಕರು, ಅಲಹಬಾದ್ ಇವರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಮಿಲಿಟರಿ ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರು/ ಮಾಜಿ ಸೈನಿಕರ ಅವಲಂಬಿತರು ಹಾಗೂ ರಕ್ಷಣಾ ಸಿವಿಲ್ ಪಿಂಚಣಿ ಪಡೆಯುತ್ತಿರುವವರಿಗೆ, ಪಿಂಚಣಿಗೆ ಸಂಬಂಧಿಸಿದ ಯಾವುದೇ ನೂನ್ಯತೆಗಳು ಇದ್ದಲ್ಲಿ ಅವುಗಳನ್ನು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪಿಂಚಣಿ ಅದಾಲತ್‌ನ್ನು ಜನವರಿ 3 ಮತ್ತು 4ರಂದು ಬೆಳಗ್ಗೆ 9ಗಂಟೆಗೆ ಕೆಳಗಿನ ಕೊಡಗು ಗೌಡ ಸಮಾಜ, ಜನರಲ್ ತಿಮ್ಮಯ್ಯ ಸ್ಟೇಡಿಯಂ ಹತ್ತಿರ, ಅಪ್ಪಯ್ಯ ಗೌಡ ರಸ್ತೆ, ಮಡಿಕೇರಿ ಇಲ್ಲಿ ಹಮ್ಮಿಕೊಂಡಿದೆ.
ಎಲ್ಲಾ ಮಿಲಿಟರಿ ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರು/ ಮಾಜಿ ಸೈನಿಕರ ಅವಲಂಬಿತರು ಪಿಂಚಣಿ ನೂನ್ಯತೆಗಳ ನಿವಾರಣೆಗೆ ಮುಂಚಿತವಾಗಿ ಅರ್ಜಿಯನ್ನು ಪೂರ್ಣಗೊಳಿಸಿ ಪೆನ್ಶನ್ ಪೆಮೆಂಟ್ ಆರ್ಡರ್/ಪಿಂಚಣಿ ಪಡೆಯುತ್ತಿರುವ ಖಜಾನೆ/ ಬ್ಯಾಂಕಿನ ವಿವರವುಳ್ಳ ದಾಖಲೆಗಳ ಪ್ರತಿಯನ್ನು ಲಗತ್ತಿಸಿ, ಎಸ್.ಕೆ.ಶರ್ಮಾ, ಪೆನ್ಶನ್ ಅದಾಲತ್ ಆಫೀಸರ್, ಇ-ಮೇಲ್ -pensionadalat@gmail.com-, ಪ್ಯಾಕ್ಸ್ ನಂ: 0532-2421873, ಮೊಬೈಲ್:09450613777 ಇವರಿಗೆ ಇ-ಮೇಲ್/ಫ್ಯಾಕ್ಸ್ ಕಳುಹಿಸುವಂತೆ ತಿಳಿಸಲಾಗಿದೆ.
ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರನ್ನು ಸಂಪರ್ಕಿುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.