ಕೋಟ: ಯುವಕನ ಸಂಶಯಾಸ್ಪದ ಸಾವು

Update: 2018-12-27 16:32 GMT

ಕೋಟ, ಡಿ. 27: ಐರೋಡಿ ಗ್ರಾಮದ ದಂಡೆಬೆಟ್ಟುವಿನ ಹರೀಶ್ ಕುಂದರ್ (29) ಎಂಬವರ ಮೃತದೇಹ ಇಂದು ಬೆಳಗ್ಗೆ ಸಾಸ್ತಾನದ ಮಧುರಾ ಬಾರ್ ಬಳಿಯ ನಿರ್ಮಾಣ ಹಂತದ ಕಟ್ಟಡದ ಮೇಲೆ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ ಎಂದು ಮೃತರ ಸಹೋದರ ಗಿರೀಶ್ ಕುಂದರ್ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇಲೆಕ್ಟ್ರಿಷಿಯನ್ ಹಾಗೂ ಡಿಜೆ ಸೌಂಡ್ ಸಿಸ್ಟಮ್ ಬಾಡಿಗೆ ವ್ಯವಹಾರ ನಡೆಸುವ ಹರೀಶ್, ಡಿ. 26ರ ಬೆಳಗ್ಗೆ 9:30ಕ್ಕೆ ಸಾಸ್ತಾನ ಗೋಳಿಗರಡಿಯಲ್ಲಿ ಲೈಟಿಂಗ್ ಕೆಲಸಕ್ಕೆ ತೆರಳುವುದಾಗಿ ತಿಳಿಸಿ ಹೋಗಿದ್ದರು. ಆದರೆ ರಾತ್ರಿ ಅವರು ಮನೆಗೆ ಬಂದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News