×
Ad

ಚೀನಾದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪರೀಕ್ಷೆ

Update: 2018-12-27 23:53 IST

ಬೀಜಿಂಗ್, ಡಿ. 27: ರಶ್ಯದಿಂದ ಆಮದುಮಾಡಿಕೊಂಡಿರುವ ಅತ್ಯಾಧುನಿಕ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಚೀನಾ ಯಶಸ್ವಿಯಾಗಿ ಪರೀಕ್ಷಿಸಿದೆ.

ಇದೇ ಕ್ಷಿಪಣಿ ವ್ಯವಸ್ಥೆಯನ್ನು ಪಡೆಯಲು ಭಾರತವೂ ರಶ್ಯದೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

 ಎಸ್-400 ಕ್ಷಿಪಣಿ ವ್ಯವಸ್ಥೆಗಳಿಗಾಗಿ ಚೀನಾವು ರಶ್ಯದೊಂದಿಗೆ 2015ರಲ್ಲಿ 3 ಬಿಲಿಯ ಡಾಲರ್ (ಸುಮಾರು 21,100 ಕೋಟಿ ರೂಪಾಯಿ) ಮೊತ್ತದ ಒಪ್ಪಂದವನ್ನು ಮಾಡಿತ್ತು. ಕೊನೆಯ ಕ್ಷಿಪಣಿಯನ್ನು ಚೀನಾ ಜುಲೈ ತಿಂಗಳಲ್ಲಿ ಪಡೆದುಕೊಂಡಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯು ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಪರೀಕ್ಷಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಪಡೆ ಕಳೆದ ತಿಂಗಳು ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯನ್ನು ಪರೀಕ್ಷಿಸಿದ್ದು, 250 ಕಿಲೋಮೀಟರ್ ದೂರದಲ್ಲಿರುವ ‘ಧಾವಿಸುವ ಕೃತಕ ಗುರಿ’ಯೊಂದನ್ನು ಯಶಸ್ವಿಯಾಗಿ ಧ್ವಂಸಗೈದಿದೆ ಹಾಗೂ ಕ್ಷಿಪಣಿಯು ಸೆಕಂಡ್‌ಗೆ 3 ಕಿ.ಮೀ. ಸೂಪರ್‌ಸಾನಿಕ್ ವೇಗದಲ್ಲಿ ಚಿಮ್ಮಿದೆ ಎಂದು ಹಾಂಕಾಂಗ್‌ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಗುರುವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News