ರಶ್ಯದ ನೂತನ ಹೈಪರ್‌ಸಾನಿಕ್ ಕ್ಷಿಪಣಿ ಬಳಕೆಗೆ ಸಿದ್ಧ

Update: 2018-12-27 18:24 GMT

ಮಾಸ್ಕೊ, ಡಿ. 27: ರಶ್ಯದ ನೂತನ ಹೈಪರ್‌ಸಾನಿಕ್ (ಶಬ್ದಕ್ಕಿಂತಲೂ ವೇಗದ) ಕ್ಷಿಪಣಿ ವ್ಯವಸ್ಥೆಯನ್ನು 2019ರಲ್ಲಿ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ನೈರುತ್ಯ ರಶ್ಯದ ಡೊಂಬರೊವಸ್ಕಿ ಸೇನಾ ವಾಯುನೆಲೆಯಿಂದ ‘ಅವನ್‌ಗಾರ್ಡ್’ ಹೈಪರ್‌ಸಾನಿಕ್ ವ್ಯವಸ್ಥೆಯ ಪರೀಕ್ಷೆಯನ್ನು ಬುಧವಾರ ವೀಕ್ಷಿಸಿದ ಬಳಿಕ ಅವರು ಈ ಹೇಳಿಕೆ ನೀಡಿದರು.

‘‘ನೂತನ ಖಂಡಾಂತರ ಆಯಕಟ್ಟಿನ ಕ್ಷಿಪಣಿ ವ್ಯವಸ್ಥೆ ‘ಅವನ್‌ಗಾರ್ಡ್’ ಮುಂದಿನ ವರ್ಷ ರಶ್ಯ ಸೇನೆಯನ್ನು ಸೇರುತ್ತದೆ ಹಾಗೂ ಆಯಕಟ್ಟಿನ ಕ್ಷಿಪಣಿ ಪಡೆಯ ಮೊದಲ ರೆಜಿಮೆಂಟನ್ನು ನಿಯೋಜಿಸಲಾಗುವುದು’’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News