ಕುಂದಾಪುರ: ಗುಂಪಾಗಿ ದಾಳಿ ಮಾಡುತ್ತಿದ್ದ ಚಿರತೆಗಳು ಬೋನಿಗೆ

Update: 2018-12-28 11:21 GMT

ಕುಂದಾಪುರ, ಡಿ. 28: ಹಗಲು ಹೊತ್ತಿನಲ್ಲಿ ಗುಂಪಾಗಿ ಬಂದು ದಾಳಿ ಮಾಡುತ್ತಿದ್ದ ಮೂರು ಚಿರತೆಗಳಲ್ಲಿ ಎರಡನ್ನು ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಇರ್ಜಿಕೊಡ್ಲು ಬಳಿ ಸೆರೆ ಹಿಡಿಯಲಾಗಿದೆ.

ಇಲ್ಲಿನ ನಿವಾಸಿ ಗುಲಾಬಿ ಕುಲಾಲ್ತಿ ಮನೆಯ ಹಟ್ಟಿಯಲ್ಲಿದ್ದ ದನಕರುಗಳ ಮೇಲೆ 3 ಚಿರತೆ ಗುಂಪಾಗಿ ದಾಳಿ ಮಾಡಿದ್ದವು. ಇದುವರೆಗೆ 20 ಹಸು ಮತ್ತು 15 ಸಾಕು ನಾಯಿ, ಬೆಕ್ಕುಗಳನ್ನು ಚಿರತೆಗಳು ಹಿಡಿದಿದ್ದವು. ಗುಂಪಾಗಿ ಬಂದು ದಾಳಿ ಮಾಡುತ್ತಿದ್ದವನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು.

ಚಿರತೆಯ ದಾಳಿಯಿಂದಾಗಿ ಸ್ಥಳೀಯರು ಒಂಟಿಯಾಗಿ ತಿರುಗಾಡುವುದು ಮತ್ತು ರಾತ್ರಿ ಸಂಚಾರ ಮಾಡುವುದನ್ನೆ ನಿಲ್ಲಿಸಿದ್ದರು ಎನ್ನಲಾಗಿದೆ. ಘಟನೆಯ ಕುರಿತು ಶಂಕರನಾರಾಯಣ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಇಲಾಖೆ ಗುಲಾಬಿ ಕುಲಾಲ್ತಿ ಮನೆಯ ಬಳಿ ಬೋನು ಇರಿಸಿತ್ತು. ಒಂದು ದಿನದಲ್ಲಿ ಎರಡು ಚಿರತೆಗಳು ಸೆರೆಯಾಗಿದ್ದು, ಮೂರನೆ ಚಿರತೆಗಾಗಿ ಬೋನಿರಿಸಲಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News