ಇಂಡೋನೇಶ್ಯದ ಇನ್ನೊಂದು ದ್ವೀಪದಲ್ಲಿ ಭೂಕಂಪ

Update: 2018-12-28 15:03 GMT

ಜಕಾರ್ತ, ಡಿ. 28: ಪೂರ್ವ ಇಂಡೋನೇಶ್ಯದ ರಾಜ್ಯದ ವೆಸ್ಟ್ ಪಪುವದಲ್ಲಿ ಸೋಮವಾರ ರಿಕ್ಟರ್ ಮಾಪಕದಲ್ಲಿ 5.8ರಷ್ಟಿದ್ದ ಭೂಕಂಪ ಸಂಭವಿಸಿದೆ ಎಂದು ಯು.ಎಸ್.ಜಿಯಾಲಜಿಕಲ್ ಸರ್ವೆ ತಿಳಿಸಿದೆ.

ಒಂದು ವಾರದ ಹಿಂದೆ ಇದೇ ವಲಯದಲ್ಲಿ ಸಂಭವಿಸಿದ ಸುನಾಮಿಯಿಂದ ಆಘಾತಗೊಂಡಿದ್ದ ನಿವಾಸಿಗಳು ತತ್ತರಿಸಿದ್ದಾರೆ.

ಭೂಕಂಪದಿಂದಾಗಿ ಸಂಭವಿಸಿದ ನಷ್ಟಗಳ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ.

ಭೂಕಂಪ ಸಂಭವಿಸಿದ ಪಪುವದ ಈ ಭಾಗದಲ್ಲಿ ಜನಸಂಖ್ಯೆ ವಿರಳವಾಗಿದೆ.

ಭೂಕಂಪದ ಕೇಂದ್ರ ಬಿಂದು ಮನೋಕ್ವಾರಿ ನಗರದ ಸಮೀಪದ ಭೂಮಿಯಲ್ಲಿ 55 ಕಿ.ಮೀ. ಆಳದಲ್ಲಿತ್ತು.

ಭೂಕಂಪದ ತೀವ್ರತೆ ಸುನಾಮಿಗಳನ್ನು ಸೃಷ್ಟಿಸುವ ಪ್ರಮಾಣದಲ್ಲಿ ಇರಲಿಲ್ಲ ಎಂದು ಇಂಡೋನೇಶ್ಯ ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News