ಟಿವಿ ನಿರೂಪಕನಿಂದ ಪ್ರವಾದಿ ನಿಂದನೆ: ಎಸ್ಸೆಸ್ಸೆಫ್ ಖಂಡನೆ
Update: 2018-12-28 22:50 IST
ಬೆಂಗಳೂರು, ಡಿ. 28: ಟಿವಿ ಚರ್ಚೆಯೊಂದರಲ್ಲಿ ನಿರೂಪಕರೋರ್ವರು ಅನಗತ್ಯವಾಗಿ ಪ್ರವಾದಿಯವರ ಹೆಸರನ್ನು ಎಳೆದು ತಂದು ನಿಂದನೆ ಮಾಡಿರುವುದು ಖಂಡನಾರ್ಹ ಎಂದು ಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಹೇಳಿದ್ದಾರೆ.
ಪ್ರೊ. ಭಗವಾನ್ ಅವರು ರಾಮಾಯಣಕ್ಕೆ ಸಂಬಂಧಪಟ್ಟು ಬರೆದ ಕೃತಿಯಲ್ಲಿ ಯಾವುದಾದರು ಸಮುದಾಯಕ್ಕೆ ಭಾವನೆಗೆ ಘಾಸಿಯಾಗುವಂತಹ ವಿಚಾರಗಳಿದ್ದರೆ; ಅದು ಬೆಂಬಲಾರ್ಹವಲ್ಲ. ಆದರೆ ಆ ಕುರಿತ ಚರ್ಚೆಯಲ್ಲಿ ಪ್ರವಾದಿಯವರ ಹೆಸರನ್ನು ಎಳೆದು ತರಬೇಕಾದ ಅಗತ್ಯವೇ ಇರಲಿಲ್ಲ. ಪ್ರೊ. ಭಗವಾನ್ ಅವರು ಪ್ರವಾದಿಯವರ ಅನುಯಾಯಿಯಲ್ಲ. ಪ್ರವಾದಿಯವರ ಅನುಯಾಯಿಗಳಾರೂ ಶ್ರೀರಾಮನ ಕುರಿತು ಆಕ್ಷೇಪದ ಮಾತು ಆಡಿದ್ದೂ ಅಲ್ಲ. ಹಾಗಿರುವಾಗ ಅಲ್ಲಿ ಪ್ರವಾದಿಯವರ ಹೆಸರನ್ನು ಎಳೆದು ತರಬೇಕಾದ ಅಗತ್ಯ ಏನಿತ್ತು ? ಇಂತಹ ಪತ್ರಕರ್ತರು ಸಮಾಜಕ್ಕೆ ಅಪಾಯಕಾರಿ ಎಂದು ಇಸ್ಮಾಈಲ್ ಸಖಾಫಿ ತಿಳಿಸಿದ್ದಾರೆ.