×
Ad

ಖೋಟಾ ನೋಟು ಚಲಾವಣೆ: ಓರ್ವ ಸೆರೆ

Update: 2018-12-28 23:04 IST

ಕೊಣಾಜೆ, ಡಿ. 28:  ಮುಡಿಪು ಸಮೀಪದ ಹೂಹಾಕುವ ಕಲ್ಲು ಎಂಬಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಇರಾ ಗ್ರಾಮದ ಅಬ್ಬಾಸ್ (48) ಎಂದು ಗುರುತಿಸಲಾಗಿದೆ.

ಖೋಟಾ ನೋಟು ಚಲಾವಣೆಯ ಬಗ್ಗೆ ಮಾಹಿತಿ ಅರಿತ ಹೆಡ್ ಕಾನ್‍ಸ್ಟೇಬಲ್ ರವಿಚಂದ್ರ ಸಿ.ಎಚ್.ಸಿ ಸ್ಥಳಕ್ಕೆ ತೆರಳಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ತಡೆದು ಪರಿಶೀಲಿಸಿದಾಗ ಐನೂರು ಬೆಲೆಯ ಎರಡು ನೋಟು ಹಾಗೂ ನೂರರ ಒಂದು ನೋಟು ಪತ್ತೆಯಾಗಿದ್ದು, ಬಳಿಕ ಈತನನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News