×
Ad

ಡಿ. 30: ಕುಂದಾಪುರದಲ್ಲಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತ್ಯಕ್ರಿಯೆ

Update: 2018-12-29 10:14 IST

ಉಡುಪಿ, ಡಿ. 29: ಹೈದರಾಬಾದ್ ನ  ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಂತ ಊರು ಕುಂದಾಪುರ ತಾಲೂಕಿನ ಯೆಡಾಡಿಯಲ್ಲಿ ರವಿವಾರ ಬೆಳಗ್ಗೆ  10 ಗಂಟೆಗೆ ನಡೆಯಲಿದೆ.

ಶನಿವಾರ  ಬೆಳಗ್ಗೆ 11ರಿಂದ 2 ಗಂಟೆ ತನಕ ಯಲಹಂಕದಲ್ಲಿರುವ ಸಶಸ್ತ್ರ ಪೊಲೀಸ್ ಪಡೆಯ ತರಬೇತಿ ಶಾಲೆಯ ಆವರಣದಲ್ಲಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ  5 ಗಂಟೆಯ ಸುಮಾರಿಗೆ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಗುವುದು. ಇಂದು ರಾತ್ರಿ 11 ಗಂಟೆಗೆ ಪಾರ್ಥಿವ ಶರೀರ ಮಧುಕರ ಶೆಟ್ಟಿಯವರ ಊರಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News