×
Ad

ಪಾಣಾಜೆಯ ಖ್ಯಾತ ವೈದ್ಯ ಡಾ. ಮಹಾಲಿಂಗ ಭಟ್ ನಿಧನ

Update: 2018-12-29 17:14 IST

ಪುತ್ತೂರು, ಡಿ. 29: ಪಾಣಾಜೆಯ ಖ್ಯಾತ ವೈದ್ಯ ಪಿ.ಮಹಾಲಿಂಗ ಭಟ್ (90) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. 

ಪುತ್ತೂರು ತಾಲೂಕಿನ ಪಾಣಾಜೆ ಅರ್ಧಮೂಲೆ ಗಾರ್ಡನ್ ವ್ಯೂ ದಿ.ಶಂಕರ್ ನಾರಾಯಣ ಭಟ್ ಮತ್ತು ದಿ. ಹೊನ್ನಮ್ಮ ದಂಪತಿ ಪುತ್ರರಾದ ಇವರು ಎಂ.ಬಿ.ಬಿ.ಎಸ್ ಉನ್ನತ ಶಿಕ್ಷಣವನ್ನು ಮೈಸೂರಿನ ಪ್ರತಿಷ್ಠಿತ ಜಯಚಾಮರಾಜ ಸರಕಾರಿ ವಿಶ್ವ ವಿದ್ಯಾಲಯದಲ್ಲಿ ಪಡೆದಿದ್ದು ಊರಿನಲ್ಲೇ ವೈದ್ಯಕೀಯ ಮತ್ತು ಕೃಷಿಕರಾಗಿದ್ದರು.

ಅರ್ಧಮೂಲೆಯಲ್ಲಿ ಪ್ರಕಾಶ್ ಕ್ಲಿನಿಕ್ ಎಂಬ ಆಸ್ಪತ್ರೆಯನ್ನು ಆರಂಭಿಸಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಅವಧಿಯ ರೈಲ್ವೆ ಸಚಿವ ಟಿ.ಎಂ.ಎ ಪೈ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕ್ಲಿನಿಕ್‍ನ್ನುಉದ್ಘಾಟಿಸಿದ್ದರು ಇದೀಗ ಅವರ ಸೊಸೆ ಡಾ. ಪ್ರಸನ್ನ ಅಖಿಲೇಶ್ "ಗಾರ್ಡನ್ ವ್ಯೂ" ಹೆಸರಿನಲ್ಲಿ ಆಯುರ್ವೇದ ಕ್ಲಿನಿಕ್ ನಡೆಸುತ್ತಿದ್ದಾರೆ.

ಮೃತರು ಪತ್ನಿ ಪರಮೇಶ್ವರಿ, ಪುತ್ರಿಯರಾದ ಮನಶಾಸ್ತ್ರಜ್ಞೆ ಆಶಾ ಪ್ರಕಾಶ್, ಪತ್ರಿಕೋದ್ಯಮಿ ಅರುಣಾ ರಾಜಗೋಪಾಲ್, ಬಿ.ಎ.ಎಂ.ಎಸ್ ಆಯುರ್ವೇದ ಡಾ.ಅನುಪಮಾ ರವಿಕೃಷ್ಣ, ಕಂಪ್ಯೂಟರ್ ಇಂಜಿನಿಯರ್ ಅಶ್ವಿನಿ ಕೃಷ್ಣ ಪುತ್ರ ವಾಕ್ ಮತ್ತು ಶ್ರವಣ ತಜ್ಞ ಡಾ.ಅಖಿಲೇಶ್‍ರವರನ್ನು ಅಗಲಿದ್ದಾರೆ. 

ಮೃತರು ಸುಬೋಧ ಪ್ರೌಢ ಶಾಲೆ ಪಾಣಾಜೆಯಲ್ಲಿ 20 ವರ್ಷ ಕಾರ್ಯದರ್ಶಿ ಮತ್ತು ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 15 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News