ಸಜೀಪಮೂಡ ಗ್ರಾ.ಪಂ. ಮಾಜಿ ಸದಸ್ಯ ಇಬ್ರಾಹಿಂ ನಿಧನ
Update: 2018-12-29 20:47 IST
ಬಂಟ್ವಾಳ, ಡಿ. 29: ಕೊಳಕೆ ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ, ಸಜೀಪಮೂಡ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಎಸ್. ಇಬ್ರಾಹಿಂ ಕೊಳಕೆ (78) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕೊಳಕೆ ಸಮುದಾಯ ಭವನ ನಿರ್ಮಾಣಕ್ಕೆ ಪ್ರಮುಖ ಪಾತ್ರ ವಹಿಸಿದ್ದರು. ಮೃತರು ಪತ್ನಿ, ಆರು ಮಂದಿ ಪುತ್ರರನ್ನು ಹಾಗೂ ನಾಲ್ಕು ಮಂದಿ ಪುತ್ರಿಯರನ್ನು ಅಗಲಿದ್ದಾರೆ.