×
Ad

ಪಡುಬಿದ್ರೆ : ಟಿಪ್ಪರ್ ಢಿಕ್ಕಿ; ಬೈಕ್‍ ಸವಾರ ಮೃತ್ಯು

Update: 2018-12-29 21:20 IST

ಪಡುಬಿದ್ರೆ, ಡಿ. 29: ಬೈಕ್‍ಗೆ ಟಿಪ್ಪರ್ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಕಾಪು ಪೆಟ್ರೋಲ್ ಬಂಕ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಬೈಕ್ ಸವಾರ ಸಾಯಿಬ್ರಕಟ್ಟೆ ನಿವಾಸಿ ಶ್ರೀಕಾಂತ್ (23) ಎಂದು ಗುರುತಿಸಲಾಗಿದೆ. ಸಂದೇಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಇಂದು ಮಧ್ಯಾಹ್ನ ಉಡುಪಿಯಿಂದ ಮಂಗಳೂರು ಕಡೆಗೆ ಬೈಕ್‍ನಲ್ಲಿ ಶ್ರೀಕಾಂತ್ ಮತ್ತು ಸಂದೇಶ್ ತೆರಳುತಿದ್ದರು. ಈ ವೇಳೆ ಟಿಪ್ಪರ್ ಢಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಶ್ರೀಕಾಂತ್ ಮೃತಪಟ್ಟರು ಎಂದು ತಿಳಿದುಬಂದಿದೆ.

ಶ್ರೀಕಾಂತ್ ಮೈಸೂರಿನಲ್ಲಿ ಹೊಟೇಲ್‍ನಲ್ಲಿ ಕೆಲಸ ಮಾಡುತಿದ್ದು, ಸಂದೇಶ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತಿದ್ದರು. ಇಬ್ಬರೂ ರಜೆಯಲ್ಲಿ ಬಂದಿದ್ದು, ಮಂಗಳೂರಿನಲ್ಲಿ ಸಂಬಂಧಿಕರ ಗೃಹ ಪ್ರವೇಶಕ್ಕೆ ಬೈಕ್‍ನಲ್ಲಿ ತೆರಳಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News