ಪದವಿ ಪರೀಕ್ಷೆ: ಪಿಪಿಸಿಗೆ ಮೂರು ರ್ಯಾಂಕ್
Update: 2018-12-29 21:26 IST
ಉಡುಪಿ, ಡಿ.29: ಮಂಗಳೂರು ವಿಶ್ವವಿದ್ಯಾನಿಲಯವು 2017-18ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮೂರು ರ್ಯಾಂಕುಗಳನ್ನು ಪಡೆದುಕೊಂಡಿದೆ.
ಕೃತಿ ಕೆ.ಭಾಗವತ್ ವಿಜ್ಞಾನ ಪದವಿಯಲ್ಲಿ ಮೂರನೇ ರ್ಯಾಂಕ್, ನವ್ಯ ಟಿ. ತಿಂಗಳಾಯ ಬಿಬಿಎಂನಲ್ಲಿ ಆರನೇ ರ್ಯಾಂಕ್ ಹಾಗೂ ಪ್ರಥಮ ಎಸ್. ಸಾಲಿಯಾನ್ ಬಿ.ಕಾಂ.ನಲ್ಲಿ ಒಂಭತ್ತನೇ ರ್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ರು ಅಭಿನಂದಿಸಿದ್ದಾರೆ.