ಪ್ರವಾದಿ ಬಗ್ಗೆ ನಿಂದನಾತ್ಮಕ ಹೇಳಿಕೆ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡನೆ
Update: 2018-12-29 22:14 IST
ಉಡುಪಿ, ಡಿ.29: ಬೆಂಗಳೂರಿನ ಖಾಸಗಿ ಚಾನೆಲ್ ಒಂದರ ನಿರೂಪಕ ಇತ್ತೀಚೆಗೆ ವಿಚಾರವಾದಿ ಪ್ರೊ.ಭಗವಾನ್ ಹೇಳಿಕೆ ಕುರಿತು ವಿಶ್ಲೇಷಿಸುವಾಗ ಪ್ರವಾದಿ ಮುಹಮ್ಮದ್(ಸ) ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿರುವುದನ್ನು ಉುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡಿಸಿದೆ.
ಮುಸ್ಲಿಮರ ನಂಬಿಕೆಗಳಿಗೆ ಘಾಸಿಯುಂಟು ಮಾಡಿದ ಮತ್ತು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದಾದ ಹೇಳಿಕೆಯನ್ನು ಟಿವಿ ಮಾಧ್ಯಮದ ಮೂಲಕ ಪ್ರಸಾರ ಮಾಡಿರುವ ಈತನ ವಿರುದ್ಧ ಧರ್ಮ ನಿಂದನೆ, ಪ್ರವಾದಿ ನಿಂದನೆ ಹಾಗೂ ನಿರಾಧಾರ ಆರೋಪಗಳನ್ನು ಹೊರಿಸಿ ದ್ವೇಷವನ್ನು ಹರಡುವ ಹಾಗೂ ಶಾಂತಿಭಂಗವನ್ನುಂಟು ಮಾಡಿದ ಪ್ರಕರಣದಡಿ ಸ್ವಯಂ ಪ್ರೇರಿತ ಮೊಕದ್ದಮೆ ಹೂಡುವಂತೆ ಒತ್ತಾಯಿಸಿ ಒಕ್ಕೂಟ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ ಮನವಿ ಅರ್ಪಿಸಿದೆ.