×
Ad

ನಿರೂಪಕನಿಂದ ಪ್ರವಾದಿಯ ನಿಂದನೆ: ದೂರು ದಾಖಲು

Update: 2018-12-29 22:32 IST

ಮಂಗಳೂರು, ಡಿ.29: ಖಾಸಗಿ ಸುದ್ದಿವಾಹಿನಿ ನಿರೂಪಕರಾದ ಅಜೀತ್ ಹನುಮಕ್ಕನ್ ಚರ್ಚಾಕೂಟನಲ್ಲಿ ಪ್ರವಾದಿಯ ನಿಂದನೆ ಮಾಡಿರುವುದು ಖಂಡನೀಯವಾಗಿದೆ ಎಂದು ಬಜ್ಪೆ ಸರೌಂಡ್ ಮುಸ್ಲಿಂ ವೆಲ್ಫೇರ್ ಅಸೋಸಿಯಶನ್ ಅಧ್ಯಕ್ಷ ಸಾಹುಲ್ ಹಮೀದ್ ಹೇಳಿದರು.

ಖಾಸಗಿ ಸುದ್ದಿವಾಹಿನಿ ಹಾಗೂ ನಿರೂಪಕರಿಂದ ಧಾರ್ಮಿಕವಾಗಿ ಹಾಗೂ ಭಾರತದ ಸಾಂಸ್ಕೃತಿಕ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಇಂತಹ ವ್ಯಕ್ತಿಗಳು ನಿರೂಪಕರಾಗಿರುವುದು ಪತ್ರಿಕೋದ್ಯಮಕ್ಕೆ ಬಹುದೊಡ್ಡ ಕಳಂಕವಾಗಿದೆ ಎಂದರು.

ವಿಶ್ವ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಹೇಳಿರುವುದರಿಂದ ಇಂತವರ ವಿರುದ್ಧ ಮುಸ್ಲಿಮ್ ಸಮುದಾಯದ ಹಾಗೂ ಜಾತ್ಯತೀತ ಸಂಘಸಂಸ್ಥೆಗಳು ಕಾನೂನು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಬಜ್ಪೆ ಸರೌಂಡ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಸಾಹುಲ್ ಹಮೀದ್ ನೇತೃತ್ವದ ನಿಯೋಗ ಖಾಸಗಿ ಸುದ್ದಿವಾಹಿನಿಯ ನಿರೂಪಕ ಅಜೀತ್ ಹನುಮಕ್ಕನವರ್ ಎಂಬಾತನ ವಿರುದ್ಧ ಬಜ್ಪೆ ಪೋಲಿಸ್ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣವನ್ನು ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ಬಜ್ಪೆ ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ದೂರನ್ನು ಸ್ವೀಕರಿಸಿದರು. ಆದಷ್ಟು ಬೇಗ ನ್ಯಾಯವನ್ನು ದೊರಕಿಸಿ ಕೊಡುವ ಬಗ್ಗೆ ಭರವಸೆ ನೀಡಿದರು.

ನಿಯೋಗದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಕಾರ್ಯದರ್ಶಿ ಮುಹಮ್ಮದ್ ಸ್ವಾಲಿಹ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅತಾಹುಲ್ಲಾ ಜೋಕಟ್ಟೆ, ಬಜ್ಪೆ ಸರೌಂಡ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಉಪಾಧ್ಯಕ್ಷ ನಿಸಾರ್ ಕರಾವಳಿ ಇಸ್ಮಾಯೀಲ್ ಇಂಜಿನಿಯರ್, ಫಾರೂಕ್ ಬಜ್ಪೆ, ನಾಸಿರ್ ಅಹ್ಮದ್, ಹಸನ್ ಎಂ.ಎಚ್, ಎಂ.ಅಶ್ರಫ್, ಅಬ್ದುಲ್ ಅಝೀಝ್ ಪಟ್ಟಾಡಿ, ರಹೀಮ್ ಬಜ್ಪೆ, ಎಂ.ಎಸ್. ಅಶ್ರಫ್, ಫಯಾಝ್ ಬಜ್ಪೆ, ಅಬ್ಬಿ ಎಚ್.ಆರ್. ಮತ್ತು ಜಲಾಲುದ್ದೀನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News