×
Ad

ವಿಮಾನಯಾನದಲ್ಲೇ ಬಟ್ಟೆಬಿಚ್ಚಿ ನಗ್ನನಾದ ಪ್ರಯಾಣಿಕ !

Update: 2018-12-30 09:41 IST

ಲಕ್ನೋ, ಡಿ. 30: ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಲಕ್ನೋಗೆ ಬರುತ್ತಿದ್ದ ಪ್ರಯಾಣಿಕನೊಬ್ಬ ವಿಮಾನಯಾನದ ವೇಳೆ ತನ್ನ ಬಟ್ಟೆಗಳನ್ನು ಕಳಚಿ ನಗ್ನವಾಗಿ ವಿಮಾನದಲ್ಲಿ ತಿರುಗಾಡಿದ ಅಪರೂಪದ ಘಟನೆ ವರದಿಯಾಗಿದೆ.

ತಕ್ಷಣ ಕಾರ್ಯಪ್ರವೃತ್ತರಾದ ವಿಮಾನ ಸಿಬ್ಬಂದಿ ಆತನಿಗೆ ಹೊದಿಕೆ ಹೊದಿಸಿದರು. ವಿಮಾನ ಹಾರಾಟದಲ್ಲಿರುವಾಗಲೇ ಇಬ್ಬರು ಸಿಬ್ಬಂದಿ ಆತನನ್ನು ಹಿಡಿದು ಆಸನದಲ್ಲಿ ಕೂರಿಸಿದರು ಎಂದು ಮೂಲಗಳು ಹೇಳಿವೆ.

ಈತನ ವಿಚಿತ್ರ ವರ್ತನೆಗೆ ಕಾರಣ ತಿಳಿದುಬಂದಿಲ್ಲ. 150 ಪ್ರಯಾಣಿಕರನ್ನು ಹೊಂದಿದ್ದ ಏರ್‌ಇಂಡಿಯಾ ಐಕ್ಸ್-194 ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ 12.05ಕ್ಕೆ ಲಕ್ನೋದಲ್ಲಿ ಇಳಿದ ಬಳಿಕ ನಗ್ನ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು.

ವಿಮಾನದ ಕ್ಯಾಪ್ಟನ್‌ನ ಸೂಚನೆಯಂತೆ ಪ್ರಯಾಣಿಕನನ್ನು ಏರ್‌ಲೈನ್ಸ್ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News