ಕೆ.ಸಿ.ರೋಡು: ಎಸ್‌ವೈಎಸ್ ವತಿಯಿಂದ ಸಾಮೂಹಿಕ ಸರಳ ವಿವಾಹ

Update: 2018-12-30 10:31 GMT

ಉಳ್ಳಾಲ, ಡಿ. 30: ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬದ ಯುವತಿಯರ ವಿವಾಹ ಕಾರ್ಯದಲ್ಲಿ ಸಹಾಯ ಮಾಡುವವರಿಗೆ ದೇವನ ಸಹಾಯ ಖಚಿತ. ಕಾರ್ಯಕರ್ತರು ಫಲಾನುಭವಿಗಳನ್ನು ಹುಡುಕುವ ಸಂದರ್ಭ ಸ್ಥಳೀಯ ಪ್ರದೇಶಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕಾಗಿದೆ ಎಂದು ಕಾಸರಗೋಡು ಜಾಮಿಆ ಸಅದಿಯಾ ಪ್ರೊಫೆಸರ್ ಅಲ್‌ಹಾಜ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಕೆ.ಸಿ.ರೋಡ್ ಘಟಕದ ವತಿಯಿಂದ ಸಾಂತ್ವನ ಯೋಜನೆಯಡಿ ಕೋಟೆಕಾರ್ ನೂರ್‌ಮಹಲ್‌ನಲ್ಲಿ ರವಿವಾರ ನಡೆದ 7ನೇ ವರ್ಷದ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್‌ಹಾಜ್  ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ನಿಖಾಹ್ ನೇತೃತ್ವ ವಹಿಸಿದ್ದರು. ಮ್ಯಾರೇಜ್ ಸೆಲ್‌ ಅಧ್ಯಕ್ಷ ಯು.ಬಿ. ಮುಹಮ್ಮದ್, ಅಬ್ಬಾಸ್ ಕೊಮರಂಗಳ, ಅಶ್ರಫ್ ಕಿನಾರ, ಮುಹಮ್ಮದ್ ಸಖಾಫಿ ಸುರಿಬೈಲ್, ಇಬ್ರಾಹಿಂ ಫೈಝಿ ಉಚ್ಚಿಲ, ಅಬ್ಬಾಸ್ ಪೆರಿಬೈಲ್, ಹಂಝ ಅಜ್ಜಿನಡ್ಕ, ಅಹ್ಮದ್ ಕುಂಞಿ ಪಿಲಿಕೂರು, ಇಸ್ಮಾಯಿಲ್ ಕೊಪ್ಪಳ, ಎಂ.ಅಬ್ಬಾಸ್ ತಲಪಾಡಿ, ಅಬ್ಬಾಸ್ ಕೊಳಂಗೆರೆ, ಮಜೀದ್ ಮಾಡೂರು, ಅಬ್ದುಲ್ ಬಾರಿ ಸಅದಿ, ನಝೀರ್ ಹಾಜಿ, ಎ.ಎಚ್.ಸಿರಾಜ್, ಸಿದ್ದೀಕ್ ‌ಕೊಮರಂಗಳ, ಉಸ್ಮಾನ್ ಪಲ್ಲ, ಕೆ.ಎಸ್‌.ಬಾವ, ಬಿ.ಎಚ್.ಇಸ್ಮಾಯಿಲ್, ಮೊಯಿದ್ದೀನ್ ಬಾವ, ಖಾದರ್ ಮಕ್ಯಾರ್, ಮೂಸಾ ಕೆ.ಸಿ.ರೋಡು, ಸಿದ್ದೀಕ್ ತಲಪಾಡಿ, ಹಕೀಂ ಪೂಮಣ್ಣು, ಯಾಹ್ಯಾ ಕೆ.ಬಿ., ಅಬ್ಬಾಸ್ ಪೂಮಣ್ಣು ಇನ್ನಿತರರು ಉಪಸ್ಥಿತರಿದ್ದರು.

ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್.ಉಮರಬ್ಬ ಸ್ವಾಗತಿಸಿದರು. ಫಾರೂಕ್ ಬಟ್ಟಪ್ಪಾಡಿ ವಂದಿಸಿದರು. 

10 ವರ್ಷದಲ್ಲಿ 49 ಮಂದಿ ದಾಂಪತ್ಯಕ್ಕೆ

ಕೆ.ಸಿ.ರೋಡು ಎಸ್‌ವೈಎಸ್ ಕಳೆದ ಹತ್ತು ವರ್ಷಗಳಿಂದ 49 ಮದುವೆಗಳನ್ನು ನಡೆಸಲಾಗಿದ್ದು, ಈ ವರ್ಷ 10-ಮದುವೆ ನಡೆಸಲು ತೀರ್ಮಾನಿಸಿ, 1 ಮದುವೆ ಮನೆಯಲ್ಲೇ ನಡೆಸಿದ್ದರೆ, ಏಳು ಮದುವೆ ಸಾಮೂಹಿಕವಾಗಿ ನಡೆಸಿದೆ. ಉಳಿದ ಎರಡು ಮದುವೆ ಘಟಕ ವ್ಯಾಪ್ತಿಯೊಳಗೆ ನಡೆಸಲು ತೀರ್ಮಾನಿಸಿದ್ದು ಶೀಘ್ರ ನಡೆಯಲಿದ್ದು ಹತ್ತು ವರ್ಷಗಳಲ್ಲಿ 49 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದಂತಾಗುತ್ತದೆ.

ರವಿವಾರ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಶಬೀರ್-ಬಂಟ್ವಾಳದ ರಝಿಯಾ, ಬಂಟ್ವಾಳದ ಮುಹಮ್ಮದ್ ಅಶ್ರಫ್-ಬೆಳ್ತಂಗಡಿಯ ಶರೀಫ, ಪುತ್ತೂರಿನ ಕಲಂದರ್ ಹಸನ್-ಬೆಳ್ತಂಗಡಿಯ ಕಲಂದರ್ ಶಾಹಿದಾ, ಮೂಡಿಗೆರೆಯ ನಯಾಝ್-ಮಂಗಳೂರಿನ ಶಾಹಿದ ಬಾನು, ಕೋಲಾರದ ಸಯ್ಯದ್ ಸರ್ವರ್ ಪಾಶ-ಬೆಳ್ತಂಗಡಿಯ ಮುಮ್ತಾಝ್, ಬೆಳ್ತಂಗಡಿಯ ನೌಷಾದ್-ಉಪ್ಪಿನಂಗಡಿಯ ಶಮೀಮಾ ಹಾಗೂ ಬೆಳ್ತಂಗಡಿಯ ಆಸಿಫ್-ಆಯಿಷಾ ದಾಂಪತ್ಯ ‌ಜೀವನಕ್ಕೆ ಕಾಲಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News