ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್: ನೂತನ ಪದಾಧಿಕಾರಿಗಳ ಆಯ್ಕೆ
ಉಳ್ಳಾಲ, ಡಿ. 30: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧೀನದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ವಾರ್ಷಿಕ ಸಭೆ ತಾಜುಲ್ ಉಲಮಾ ಸುನ್ನೀ ಸೆಂಟರ್, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಚೇರಿಯಲ್ಲಿ ಸೆಕ್ಟರ್ ಅಧ್ಯಕ್ಷ ಮುಸ್ತಫ ಮಾಸ್ಟರ್ ಮುಕ್ಕಚೇರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಡಿವಿಷನ್ ಅಧ್ಯಕ್ಷ ಮುನೀರ್ ಅಹಮದ್ ಕಾಮಿಲ್ ಸಖಾಫಿ ಅವರು ಇತ್ತೀಚೆಗೆ ಮರಣ ಹೊಂದಿದ ಅಶ್ರಫ್ ಅಡ್ಡೂರು, ತೋಕೆ ಉಸ್ತಾದರ ತಾಯಿ ಹಾಗೂ ಎಲ್ಲಾ ಸುನ್ನೀ ಕಾರ್ಯಕರ್ತರ ಮೇಲೆ ತಹ್ಲೀಲ್ ನೆರವೇರಿಸಿ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಹಂಝಾ ಸುಂದರಿ ಬಾಗ್ ಸ್ವಾಗತಿಸಿರು. ಪ್ರಸ್ತುತ ಕೌನ್ಸಿಲ್ ಗೆ ರಾಜ್ಯ ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ದ.ಕ ಜಿಲ್ಲಾ ಎಸ್ಸೆಸ್ಸೆಫ್ ನಾಯಕರಾದ ಸೆಯ್ಯಿದ್ ಖುಬೈಬ್ ತಂಙಳ್,ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿ, ಡಿವಿಷನ್ ಎಲೆಕ್ಷನ್ ಆಫೀಸರ್ ಹಮೀದ್ ತಲಪಾಡಿ ,ಇಲ್ಯಾಸ್ ಪಟ್ಟೊಳಿಕೆ ಮತ್ತು ಜಾಫರ್ ಅಲೇಕಲ ಸಭೆಯಲ್ಲಿ ಉಪಸ್ಥಿತರಿದ್ದರು. ನಂತರ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶಬೀರ್ ಪೇಟೆ, ಉಪಾಧ್ಯಕ್ಷರುಗಳಾಗಿ ಹಂಝ ಸುಂದರಿಬಾಗ್, ಜಾಬಿರ್ ಫಾಲಿಳಿ , ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಾಸ್ ಮಝಮ್ಮಿಲ್ ಮದನಿ ಕೋಟೆಪುರ, ಜೊತೆ ಕಾರ್ಯದರ್ಶಿಯಾಗಿ ಸಿರಾಜ್ ಅಕ್ಕರೆಕೆರೆ, ತಶ್ರೀಫ್ ಮೇಲಂಗಡಿ, ಕೋಶಾಧಿಕಾರಿಯಾಗಿ ಮುಝಮ್ಮಿಲ್ ಕೋಟೆಪುರ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಾಝ್ ಮೇಲಂಗಡಿ, ಎಸ್ ಬಿ ಎಸ್ ಕನ್ವೀನರ್ ಮುಹಮ್ಮದ್ ಹಾಶೀರ್ ಕೋಡಿ ಅವರನ್ನು ಒಳಗೊಂಡ 44 ಮಂದಿ ಕಾರ್ಯಕಾರಿ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ಕೊನೆಗೆ ನೂತನ ಕಾರ್ಯದರ್ಶಿ ಮಝಮ್ಮಿಲ್ ಮದನಿ ವಂದಿಸಿದರು.