ವಿವಿಐಪಿ ಕಾಪ್ಟರ್ ಪ್ರಕರಣ: ನ್ಯಾಯಾಲಯದಲ್ಲಿ ಸರಕಾರ,ಇಡಿ ಹೇಳಿಕೆಗೆ ಚಿದಂಬರಂ ಟೀಕೆ

Update: 2018-12-30 16:38 GMT

ಹೊಸದಿಲ್ಲಿ,ಡಿ.30: ಪ್ರಕರಣಗಳ ವಿಚಾರಣೆ ಮತ್ತು ಸಾಕ್ಷ್ಯಾಧಾರಗಳಿಲ್ಲದೆ ತೀರ್ಪಿನ ಪ್ರಕಟಣೆಯ ‘ನೂತನ ಸುಧಾರಿತ ವ್ಯವಸ್ಥೆ ’ಯ ಕುರಿತಂತೆ ಮೋದಿ ಸರಕಾರ,ಜಾರಿ ನಿರ್ದೇಶನಾಲಯ(ಇಡಿ)ಮತ್ತು ಮಾಧ್ಯಮಗಳನ್ನು ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು,ಇದು ಕಾಂಗರೂ ನ್ಯಾಯಾಲಯಗಳನ್ನೂ ಮೀರಿಸುತ್ತಿದೆ ಎಂದಿದ್ದಾರೆ.

ಸರಕಾರ,ಇಡಿ ಮತ್ತು ಮಾಧ್ಯಮಗಳು ಈ ದೇಶದಲ್ಲಿ ತಮ್ಮಿಚ್ಛೆಯಂತೆ ನಡೆದುಕೊಂಡರೆ ಟಿವಿ ಚಾನೆಲ್‌ಗಳಲ್ಲಿಯೂ ಪ್ರಕರಣಗಳ ವಿಚಾರಣೆಗಳು ನಡೆಯಲಿವೆ ಎಂದು ಸರಣಿ ಟ್ವೀಟ್‌ಗಳಲ್ಲಿ ಅವರು ಹೇಳಿದ್ದಾರೆ.

 ಆಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಪ್ರಕರಣದಲ್ಲಿಯ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ವಿಚಾರಣೆಯ ಸಂದರ್ಭದಲ್ಲಿ ‘ಶ್ರೀಮತಿ ಗಾಂಧಿ’ ಹೆಸರನ್ನು ಪ್ರಸ್ತಾಪಿಸಿದ್ದಾನೆ ಎಂದು ಇಡಿ ಶನಿವಾರ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತ್ತು.

ಇಡಿ ಹೇಳುವುದು ಮೌಖಿಕ ಸಾಕ್ಷ್ಯವಾಗುತ್ತದೆ, ಅದು ಯಾವುದೇ ಕಾಗದದ ತುಂಡನ್ನು ಸಲ್ಲಿಸಿದರೆ ಅದು ದಾಖಲೆ ಸಹಿತ ಸಾಕ್ಷವಾಗುತ್ತದೆ ಮತ್ತು ಟಿವಿ ಚಾನೆಲ್ ಘೋಷಿಸುವುದು ತೀರ್ಪಾಗುತ್ತದೆ ಎಂದಿರುವ ಚಿದಂಬರಂ,ಇವುಗಳಿಗೆ ಸಿಆರ್‌ಪಿಸಿ ಮತ್ತು ಸಾಕ್ಷ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News