×
Ad

ಮೇಘಾಲಯ ಕಲ್ಲಿದ್ದಲು ಗಣಿ ದುರಂತ: ಅತ್ಯಾಧುನಿಕ ಸಲಕರಣೆ ಬಳಸಿ ರಕ್ಷಣಾ ಕಾರ್ಯಾಚರಣೆ

Update: 2018-12-30 23:46 IST

ಎಹ್ರಿಯಾತ್ (ಮೇಘಾಲಯ), ಡಿ. 30: ಇಲ್ಲಿನ 370 ಅಡಿ ಆಳದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿಕೊಂಡಿರುವ 15 ಕಾರ್ಮಿಕರನ್ನು ರಕ್ಷಿಸಲು ಹಲವು ರಕ್ಷಣಾ ಸಂಸ್ಥೆಗಳು ರವಿವಾರ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಲುಮ್ತಾರಿ ಗ್ರಾಮದ ಕ್ಸಾನ್ ಪ್ರದೇಶದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಡಿಸೆಂಬರ್ 13ರಂದು ಈ ಕಾರ್ಮಿಕರು ಸಿಲುಕಿಕೊಂಡಿದ್ದರು. ಮುಳುಗಲು ಬಳಸುವ ಅತ್ಯಾಧುನಿಕ ಸಲಕರಣೆಗಳನ್ನು ಸಾಗಿಸುವ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಖ್ಲಿಎಹ್ರಿಯಾತ್‌ನ ಆಟದ ಮೈದಾನದಲ್ಲಿ ಇಳಿದಿದೆ. ಇಲ್ಲಿಂದ 37 ಕಿ.ಮೀ. ದೂರದಲ್ಲಿರುವ ಘಟನಾ ಸ್ಥಳಕ್ಕೆ ಸಲಕರಣೆಗಳನ್ನು ಶೀಘ್ರದಲ್ಲಿ ಸಾಗಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕ ಸಿಲ್ವೆಸ್ಟರ್ ನಾಂಗ್‌ಟಿಂಗರ್ ಹೇಳಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ನೌಕಾ ಪಡೆಯ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಸಂಯೋಜಿಸುತ್ತಿದೆ ಎಂದು ಎನ್‌ಡಿಎಂಎ ಹಾಗೂ ಕೋಲ್ ಇಂಡಿಯಾ ಲಿಮಿಟೆಡ್ ತಿಳಿಸಿದೆ.

ಲೆಫ್ಟಿನೆಂಟ್ ಕಮಾಂಡರ್ ಆರ್. ಖೆಟ್ವಾಲ್ ನೇತೃತ್ವದ 14 ಸದಸ್ಯರ ನೌಕಾ ಪಡೆಯ ತಂಡ ಹಾಗೂ 21 ಸದಸ್ಯರ ಒರಿಸ್ಸಾ ಅಗ್ನಿಶಾಮಕ ದಳದ ತಂಡ ಶನಿವಾರ ಘಟನ ಸ್ಥಳಕ್ಕೆ ಭೇಟಿ ನೀಡಿದೆ ಎಂದು ಅಸಿಸ್ಟೆಂಟ್ ಕಮಾಂಡೆಂಟ್ ಸಂತೋಷ್ ಸಿಂಗ್ ಹೇಳಿದ್ದಾರೆ. ಖೆಡ್ವಾಲ್ ಈ ಪ್ರದೇಶದ ಪರಿಸ್ಥಿತಿ ಬಗ್ಗೆ ತಂಡಗಳಿಗೆ ವಿವರಿಸಿದ್ದಾರೆ ಹಾಗೂ ಗಣಿಯ ನಕಾಶೆ, ಸಮೀಪ ಇರುವ ಸುರಂಗದ ಬಗ್ಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News