ಪುತ್ತೂರು: ಎಂ.ಎಸ್. ಗ್ರೂಪ್, ಬ್ಲಡ್ ಹೆಲ್ಪ್ ಲೈನ್ ವತಿಯಿಂದ ರಕ್ತದಾನ ಶಿಬಿರ

Update: 2018-12-31 05:46 GMT

ಪುತ್ತೂರು, ಡಿ.31: ಎಂ.ಎಸ್. ಸಾಫ್ಟ್ ಟೆಕ್ ಇದರ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಎಂ.ಎಸ್. ಗ್ರೂಪ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ  ಜಂಟಿ ಆಶ್ರಯದಲ್ಲಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಸಹಬಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ನಗರದ ದರ್ಬೆಯ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಶಿಬಿರವನ್ನು ಕಲ್ಲೇಗ ಜುಮಾ ಮಸ್ಜಿದ್ ಮುದರ್ರಿಸ್ ಅಬೂಬಕರ್ ಸಿದ್ದೀಕ್ ಜಲಾಲಿ ದುಆ ಮೂಲಕ ಉದ್ಘಾಟಿಸಿದರು. 

ಎಂ.ಎಸ್. ಗ್ರೂಪ್ ಅಧ್ಯಕ್ಷ ಎಂ.ಎಸ್.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುದ್ದಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ ಮಾತನಾಡಿ, ರಕ್ತವನ್ನು ಇನ್ನೊಬ್ಬರಿಗಾಗಿ ದಾನ ಮಾಡುವುದು ಶ್ರೇಷ್ಠ ದಾನವಾಗಿದೆ ಎಂದರು.

ವೇದಿಕೆಯಲ್ಲಿ ಸೀತಾರಾಮ್ ರೈ, ಯೂಸುಫ್ ಮೈದಾನಮೂಲೆ, ಶಾಕಿರ್ ಅಳಕೆಮಜಲು, ನಿಸಾರ್ ಉಳ್ಳಾಲ, ಮುಸ್ತಫಾ ಅಡ್ಡೂರು, ಸಮೀರ್ ಸೀಕೊ, ಶಾಫಿ ಮುಆದ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕನ ನಿರ್ವಾಹಕರು ಉಪಸ್ಥಿತರಿದ್ದರು.

ಇದೇ ಸಂದರ್ಭ ಪುತ್ತೂರು ಪರಿಸರದಲ್ಲಿ ತುರ್ತು ಸಂದರ್ಭಗಳಲ್ಲಿ ಎಲ್ಲಾ ಕಾರ್ಯಗಳನ್ನು ಬದಿಗೊತ್ತಿ ಸಾರ್ವಜನಿಕರಿಗೆ ಸ್ಪಂದಿಸುತ್ತಾ ಆ್ಯಂಬುಲೆನ್ಸ್ ಚಾಲಕರಾಗಿ ಸಮಾಜ ಸೇವೆ ಸಲ್ಲಿಸುತ್ತಿರುವ ಮುರಳೀಧರ ವಿಠಲ ಹಾಗೂ ಸಿರಾಜುದ್ದಿನ್ ಅವರನ್ನು ಎಂ.ಎಸ್. ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು.

ಎಂ.ಎಸ್. ಸಾಫ್ಟ್ ಟೆಕ್ ಮಾಲಕ ಶಫೀಕ್ ಎಂ.ಎಸ್. ಸ್ವಾಗತಿಸಿದರು.ಶಂಸುದ್ದೀನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಒಟ್ಟು 57 ಯುನಿಟ್ ರಕ್ತವನ್ನು ದಾನಿಗಳ ನೆರವಿನಿಂದ ಸಂಗ್ರಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News