×
Ad

ಸೈಯದ್ ಅಬ್ದುಲ್ಲಾ ಹಾದಿಕೋಯ ತಂಙಳ್ ನಿಧನ

Update: 2018-12-31 22:28 IST

ಮಂಗಳೂರು, ಡಿ.31: ಮಂಗಳೂರಿನ ಫುಟ್ಬಾಲ್ ಆಟಗಾರ ಸೈಯದ್ ಅಬ್ದುಲ್ಲಾ ಹಾದಿಕೋಯ ತಂಙಳ್(70) ಬಂದರ್‌ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಹಲವು ವರ್ಷಗಳ ಕಾಲ ದ.ಕ. ಜಿಲ್ಲಾ ಮಟ್ಟದ ಫುಟ್ಬಾಲ್ ಟೀಮ್‌ನ ಕ್ಯಾಪ್ಟನ್‌ ಆಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಂತರದ ದಿನಗಳಲ್ಲೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಮೃತರು ಪತ್ನಿ , ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ದಫನ್ ಕಾರ್ಯವು ನಗರದ ಕೇಂದ್ರ ಜುಮ್ಮಾ ಮಸೀದಿಯ ವಠಾರದಲ್ಲಿ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News