ಪ್ರವಾದಿ ನಿಂದನೆ: ನಿರೂಪಕನ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು
Update: 2018-12-31 22:36 IST
ಮಂಗಳೂರು, ಡಿ.31: ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಹಮೀದ್ ಪಾಂಡೇಶ್ವರ ಎಂಬವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಪೈಗಂಬರರ ಜೀವನ ಶೈಲಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದರಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಬರುತ್ತದೆ. ಮುಸ್ಲಿಮರ ಮನಸ್ಸಿಗೆ ನೋವಾಗುವಂತೆ ಹಾಗೂ ಎರಡು ಧರ್ಮಗಳ ವಿರುದ್ಧ ವೈಷಮ್ಯ ಉಂಟು ಮಾಡಲು ಪ್ರಯತ್ನಿಸಿರುತ್ತಾರೆ’ ಎಂಬುದಾಗಿ ದೂರು ನೀಡಲಾಗಿದೆ.
ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.