ಜ. 1ರಿಂದ ಆಳ್ವಾಸ್ ವರ್ಣ ವಿರಾಸತ್ 2019
Update: 2018-12-31 22:54 IST
ಮೂಡುಬಿದಿರೆ, ಡಿ. 31: ರಾಷ್ಟ್ರ ಮಟ್ಟದ ಚಿತ್ರಕಲಾ ಶಿಬಿರ, ಆಳ್ವಾಸ್ ವರ್ಣ ವಿರಾಸತ್ 2019, ಜ. 1 ರಿಂದ ಜ. 6, ರವರೆಗೆ ಜರುಗಲಿದ್ದು, ವಿವಿಧ ರಾಜ್ಯಗಳಿಂದ 10 ಮಂದಿ ಸಮಕಾಲೀನ ಚಿತ್ರಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಆಳ್ವಾಸ್ ವರ್ಣ ವಿರಾಸತ್ 2019 ಪ್ರಶಸ್ತಿ ಪ್ರಧಾನ
ಜನವರಿ 6ರಂದು, ಸಂಜೆ 5:45ಕ್ಕೆ, ಶ್ರೀಮತಿ. ವನಜಾಕ್ಷಿ ಕೆ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಹೈದರಾಬಾದಿನ ಹಿರಿಯ ಕಲಾವಿದರಾದ ಶ್ರೀ. ಸೂರ್ಯ ಪ್ರಕಾಶ್ ಅವರಿಗೆ 2019ನೇ ಸಾಲಿನ ರಾಷ್ಟ್ರ ಮಟ್ಟದ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.