ಸಿಲಿಂಡರ್ ಸ್ಫೋಟಿಸಿ ಕಟ್ಟಡ ಕುಸಿತ: ನಾಲ್ವರು ಮೃತ್ಯು

Update: 2018-12-31 17:34 GMT

ಮಾಸ್ಕೊ,ಡಿ.31: ರಶ್ಯದಲ್ಲಿ ಕೈಗಾರಿಕಾ ನಗರವೊಂದರಲ್ಲಿ ಬಹುಮಹಡಿ ಕಟ್ಟಡದಲ್ಲಿ ಅನಿಲ ಸಿಲಿಂಡರ್ ಸ್ಫೋಟಿಸಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಕುಸಿದು ಬಿದ್ದ ಕಟ್ಟಡದ ಅವಶೇಷಗಳ ನಡುವೆ 5ಕ್ಕೂ ಅಧಿಕ ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಕೈಗಾರಿಕಾ ನಗರವಾದ ಮ್ಯಾಗ್ನಿಟಿಗೊರೊಸ್ಕ್‌ನ ಬಹುಮಹಡಿಯ ಕಟ್ಟಡವೊಂದರಲ್ಲಿ ಮುಂಜಾನೆ 6 ಗಂಟೆಯ ವೇಳೆಗೆ ಬೃಹತ್ ಅನಿಲ ಸಂಗ್ರಹಗಾರ ಸ್ಫೋಟಿಸಿದ್ದರಿಂದ ಕಟ್ಟಡದ ದೊಡ್ಜ ಭಾಗವೊಂದು ಕುಸಿದುಬಿದ್ದಿದೆ.

ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವುದು ದೃಢಪಟ್ಟಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಕುಸಿದ ಕಟ್ಟಡದಲ್ಲಿದ್ದ 28 ಮಂದಿ ನಿವಾಸಿಗಳನ್ನು ಈಗಾಗಲೇ ಸ್ಥಳದಿಂದ ತೆರವುಗೊಳಿಸಲಾಗಿದೆ.

ಕುಸಿದಕಟ್ಟಡದ ಅವಶೇಷಗಳ ನಡುವೆ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಕರ್ತರು ಶೋಧ ಕಾರ್ಯ ನಡೆಸುತ್ತಿರುವ ದೃಶ್ಯಗಳನ್ನು ರಾಷ್ಟ್ರೀಯ ಟಿವಿ ವಾಹಿನಿ ಪ್ರಸಾರ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News