×
Ad

ಕೋಡಿ ಬ್ಯಾರೀಸ್ ರಾಷ್ಟ್ರೀಯ ಸೇವಾ ವಾರ್ಷಿಕ ಶಿಬಿರ ಉದ್ಘಾಟನೆ

Update: 2019-01-01 14:12 IST

ಕುಂದಾಪುರ, ಜ. 1: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಇದರ 2018-19ರ ರಾಷ್ಟ್ರೀಯ ಸೇವಾ ಘಟಕದ ವಾರ್ಷಿಕ ಶಿಬಿರವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಲ ಅಮಾಸೆಬೈಲ್ ನಲ್ಲಿ ಉದ್ಘಾಟಿಸಲಾಯಿತು.

ಅಮಾಸೆಬೈಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಶೆಡ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಮಾಸೆಬೈಲ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭ ಅತಿಥಿಗಳಾಗಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಕೋಡಿ ಕುಂದಾಪುರ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಪ್ರಾಂಶುಪಾಲರು ಶಮೀರ್, ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ಆಚಾರ್ಯ, ಸುರೇಶ್ ಶೆಟ್ಟಿ, ಗೋಪಾಲ ಶೆಟ್ಟಿ, ಕೇಶವ ಆಚಾರ್ಯ,  ಬಾಬಿ ಬೆಳ್ಮನೆ ,  ಚಂದ್ರಶೇಖರ ಶೆಟ್ಟಿ ತಲಮಕ್ಕಿ,  ಸಹ ಶಿಕ್ಷಕರಾದ ಭರತ, ರಾಜಿವ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.

ಘಟಕದ ಯೋಜನಾಧಿಕಾರಿ ವಿನಯಾ ಕಾಮತ್   ಸ್ವಾಗತಿಸಿದರು. ಸಹಯೋಜನಾಧಿಕಾರಿ  ಕಲೀಲ್ ವಂದಿಸಿದರು. ಘಟಕದ ಸಹಯೋಜನಾಧಿಕಾರಿ ಸಂದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News