ಪಹಣಿ ಪತ್ರಿಕೆ: ದರ ಪರಿಷ್ಕರಣೆ
Update: 2019-01-01 20:11 IST
ಉಡುಪಿ, ಜ.1: ಸರಕಾರವು ಪಹಣಿ ಪತ್ರಿಕೆಗೆ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಪಹಣಿ ಪತ್ರ ವಿತರಣೆ ಕೇಂದ್ರಗಳಲ್ಲಿ ಪಹಣಿ ಒಂದಕ್ಕೆ 15 ರೂ. (4 ಪುಟಗಳವರೆಗೆ), ಹೆಚ್ಚುವರಿ ಪ್ರತಿ ಪುಟಕ್ಕೆ ತಲಾ 2 ರೂ.ನಂತೆ ಪಹಣಿಯನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.