×
Ad

ನ್ಯಾಯಾಲದ ಅದೇಶ ಪರಿಪಾಲಿನೆಯೊಂದಿಗೆ ಕಂಬಳ : ವಿ ಸುನಿಲ್

Update: 2019-01-01 23:15 IST

ಕಾರ್ಕಳ, ಜ. 1: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಕಂಬಳಕ್ಕೆ ಬೇಕಾದಪೂರ್ವ ಸಿದ್ಧತೆಯನ್ನು ಕಂಬಳಸಮಿತಿಯು ನಡೆಸಿದೆ.ನ್ಯಾಯಾಲಯದ ಯಾವುದೇ ರೀತಿಯ ಅಡೆತಡೆ ಯಿಲ್ಲದೆ ಕಂಬಳವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವಲ್ಲಿ ನ್ಯಾಯಾಲಯದ ಯಾವುದೇ ಅದೇಶ ಗಳು ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುಲಾಗುದು ಎಂದು ಕಾರ್ಕಳ ಶಾಸಕ ಹಾಗೂ ವಿರೋಧ ಪಕ್ಷದಲ್ಲಿ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ಅವರು ಮಂಗಳವಾರ ಕಾರ್ಕಳದ ಪ್ರವಾಸಿ ಬಂಗಲೆಯಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿ ಮಿಯ್ಯಾರು ಕಂಬಳ ಸಮಿತಿ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ರಿ ಮಂಗಳೂರು ಇವರ ಸಹಯೋಗದೊಂದಿಗೆ 15 ನೇ ವರ್ಷದ ಲವಕುಶ ಜೋಡುಕರೆ ಬಯಲು ಕಂಬಳವು ಜನವರಿ 5 ಶನಿವಾರ ಮಿಯ್ಯಾರು ಕಂಬಳ ಕ್ರೀಡಾಂಗಣ ದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೂರಕ್ಕು ಅಧಿಕ ಕೋಣಗಳನ್ನು ಬಾಗವಹಿಸುವ ನಿರೀಕ್ಷೆಯಿದ್ದು. ಎಲ್ಲಾ ವಿಭಾಗಳಲ್ಲಿ ವಿಜೇತ ಗಳನ್ನು ಕೋಣಗಳನ್ನು ಓಡಿಸಿದವರಿಗೆ ವಿಶೇಷ ಬಹುಮಾನ ವನ್ನು ನೀಡಲಾಗುವುದು. ನೇಗಿಲುಕಿರಿಯ ವಿಭಾಗ ಗಳ ಕೋಣಗಳ ವೇಗವನ್ನು ಪರಿಗಣಿಸಿ ಸ್ಪರ್ಧೆ ಗೆ ಅಯ್ಕೆ ಮಾಡಲಾಗುವುದು.ಸಭ್ ಜೂನಿಯರ್ ಅಥವಾ ಮೂರು ವರ್ಷದ ಕೋಣಗಳಿಗೆ ಅವಕಾಶ ವಿಲ್ಲ ಎಂದು ಸ್ಪಷ್ಟ ಪಡಿಸಿದರು.

ಜ 5 ಬೆಳ್ಳಗ್ಗೆ 8:30 ಉದ್ಘಾಟನೆಯ ಕಾರ್ಯಕ್ರಮ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್ ಗೋಪಾಲ್ ಭಂಡಾರಿ, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾದ ಹರಿದಾಸ್ ಭಟ್ ,ಮಿಯ್ಯಾರು ಚರ್ಚ್ ನ ಧರ್ಮಗುರುಗಳಾದ ರೆ ಪಾ ಜೆರೋಮ್ ಮೊಂತೆರೋ.ಮಿಯ್ಯಾರು ಜಾಮೀಯಾ ಮಸೀದಿಯ ಧರ್ಮಗುರು ಗಳಾದ ಮೌಲಾನ ಜುನೈನ್ ನೂರ್ ,ಅವರ ಉಪಸ್ಥಿತಿ ಯಲ್ಲಿ ಕಂಬಳ ಉದ್ಘಾಟಾನೆಗೊಳ್ಳಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿ ಸುನಿಲ್ ಕುಮಾರ್ ,ವಹಿಸಲಿದ್ದು ಮುಖ್ಯ ಅತಿಥಿಯಾಗಿ ಸಂಸದ ಡಾ.ಎಂ ವೀರಪ್ಪ ಮೊಯ್ಲಿ, ಉಡುಪಿ ಜಿಲ್ಲಾ ಉಸ್ತುವಾರಿ ಡಾ ಜಯಮಾಲ, ವಿಧಾನ ಪರಿಷತ್ ವಿರೋಧ ಪಕ್ಷದ ಸಚೇತಕ ಕೋಟಾ ಶ್ರೀನಿವಾಸ ಪುಜಾರಿ,ಸಂಸದೆ ಶೋಭಾ ಕರಂದಾಜ್ಲೆ ,ಜಿಲ್ಲಾ ಪಂಚಾಯತಚ ಅಧ್ಯಕ್ಷ ದಿನಕರ್ ಬಾಬು, ಮಾಜಿ ಸಚಿನ ಅಭಯ್ ಚಂದ್ರ ಜೈನ್, ಮಾಜಿ ಶಾಸಕರಾದ ಗೋಪಾಲ್ ಭಂಡಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹಾಗೂ ಇನ್ನಿತರ ಗಣ್ಯರು ಬಾಗವಹಿಸಲಿದ್ದಾರೆ.

ಜ 6 ರಂದು ಬಹುಮಾನ ವಿತರಣೆ ಸಮಾರಂಭ ದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಾಹಾ ಮಂಡಳ ಇದರ ಅಧ್ಯಕ್ಷ ರಾದ ಎಂ ಎನ್ ರಾಜೇಂದ್ರಕುಮಾರ್, ಕಂಬಳ ಸಮಿತಿ ಕಾರ್ಯದ್ಯಕ್ಷರಾದ ಜೀವನ್ ದಾಸ್ ಅಡ್ಯಾಂತಯ, ಎಸ್ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ರಾದ ಬಾಸ್ಕರ್ ಎಸ್ ಕೊಟ್ಯಾನ್, ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕಾರ್ಯ ಅಧ್ಯಕ್ಷ ಜೀವನ್ ದಾಸ್ ಅಡ್ಯಾಂತಾಯ, ಸಂಘಟನಾ ಕಾರ್ಯದರ್ಶಿಗಳಾದ ಗುಣಪಾಲ್ ಕಡಂಬ, ಸಹಕಾರ್ಯದರ್ಶಿ ಪ್ರಕಾಶ್ ಬಲಿಪ, ಉಪಾಧ್ಯಕ್ಷ ರಾದ ಉದಯ ಎಸ್ ಕೋಟ್ಯಾನ್, ಬಾಸ್ಕರ್ ಎಸ್ ಕೋಟ್ಯಾನ್ ಅಂತೋನಿ ಡಿಸೋಜಾ, ರಮೇಶ್ ಹೆಗ್ಡೆ, ರವೀಂದ್ರ ಕುಮಾರ್ ಕುಕ್ಕುಂದೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News