×
Ad

ಪ್ರವಾದಿ ನಿಂದನೆ: ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವತಿಯಿಂದ ದೂರು ದಾಖಲು

Update: 2019-01-01 23:39 IST

ಉಳ್ಳಾಲ, ಜ. 1: ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ಮಾಡುವ ರೀತಿಯಲ್ಲಿ ಮಾಧ್ಯಮದ ಸಿದ್ದಾಂತಕ್ಕೆ ಅಗೌರವ ತೋರಿ, ಮುಸ್ಲಿಮರ ಭಾವನೆಯನ್ನು ಕೆರಳಿಸಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರ್ ಹಾಗೂ ಸುವರ್ಣ ನ್ಯೂಸ್ ಚಾನಲ್ ವಿರುದ್ದ  ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕಿನ್ಯ ಸೆಕ್ಟರ್ ಸಮಿತಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದೆ ಎಂದು ಅಧ್ಯಕ್ಷರಾದ ಇರ್ಫಾನ್ ನೂರಾನಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸೈಯದ್ ತ್ವಾಹ ಮೀಂಪ್ರಿ, ಫಯಾಝ್ ಕಿನ್ಯ, ಉಸ್ಮಾನ್ ಝುಹ್ರಿ ಕುರಿಯ, ಮೂಸ ಕುಂಞ ಬದ್ರಿಯನಗರ, ಸನಾಹು ಕೂಡಾರ, ಅಯ್ಯೂಬ್ ಖುತುಬಿನಗರ, ಬಶೀರ್ ಕೂಡಾರ, ಆಶಿಕ್ ಮೀಂಪ್ರಿ, ಫಯಾಝ್ ಉಕ್ಕುಡ, ರಿಝ್ವಾನ್ ಮೀಂಪ್ರಿ, ಮೊಯಿದಿನ್ ಮೀಂಪ್ರಿ, ಸಫ್ವಾನ್ ಮೀಂಪ್ರಿ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News