×
Ad

ಕಾಣೆಯಾಗಿರುವ ಮೀನುಗಾರರ ತ್ವರಿತ ಪತ್ತೆಗೆ ಆಗ್ರಹ: ಜೆಡಿಎಸ್ ನಿಯೋಗದಿಂದ ನಾಳೆ ಸಿಎಂಗೆ ಮನವಿ

Update: 2019-01-02 17:08 IST

ಮಂಗಳೂರು, ಜ.2: ಕಳೆ ಎರಡು ವಾರಗಳಿಂದ ಸಮುದ್ರದಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವ 7 ಮೀನುಗಾರರು ಹಾಗೂ ಬೋಟ್ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ದ.ಕ. ಜಿಲ್ಲಾ ನಿಯೋಗವು ಜ.3ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಲಿದೆ.

 ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ ನೇತೃತ್ವದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ದಕ್ಷಿಣ ವಿಧಾನ ಸಭ ಕ್ಷೇತ್ರದ ಅಧ್ಯಕ್ಷ  ವಸಂತ್ ಪೂಜಾರಿ, ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷ ರತ್ನಾಕರ್ ಸುವರ್ಣರನ್ನೊಳಗೊಂಡ ನಿಯೋಗವು ಮೀನುಗಾರರನ್ನು ಶೀಘ್ರವಾಗಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ವಿನಂತಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News