ಪಡುಬಿದ್ರೆ: 156 ಶಾಲಾ ಶಿಕ್ಷಕರಿಗೆ ಸ್ವಚ್ಛಾಗ್ರಹ ತರಬೇತಿ ಕಾರ್ಯಾಗಾರ

Update: 2019-01-02 14:36 GMT

ಪಡುಬಿದ್ರೆ, ಜ.2: ಯುಪಿಸಿಎಲ್ ಅದಾನಿ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲೆಯ 156 ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸ್ವಚ್ಛಾಗ್ರಹ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಪಡುಬಿದ್ರಿಯ ನಯಾತ್ ರೆಸಿಡೆನ್ಸಿ ಹೋಟೆಲ್‌ನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಗಾರವನ್ನು ಉದ್ಘಾಟಿಸಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸ್ವಚ್ಛತೆಯು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಬೇಕು ಮತ್ತು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿಬೇಕು. ಸ್ವಚ್ಛತೆ ಯನ್ನು ಕಾಪಾಡಲು ತಾಲೂಕು ಹಾಗೂ ಜಿಪಂ ವತಿಯಿಂದ ಗ್ರಾಮಗಳಲ್ಲಿ ತ್ಯಾಜ್ಯಾ ವಿಲೇವಾರಿ ಘಟಕ ಸ್ಥಾಪಿಸಲು ಅನುದಾನ ನೀಡುತ್ತಿದ್ದು, ಅದಾನಿ ಸಂಸ್ಥೆಯ ಸಹಕಾರವೂ ಬೇಕಾಗಿದೆ ಎಂದರು.

ಅದಾನಿ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಮಾತನಾಡಿ, ಅದಾನಿ ೌಂಡೇಶನ್ ದೇಶದಲ್ಲಿ ಒಟ್ಟು 18 ರಾಜ್ಯಗಳಲ್ಲಿನ 72 ಪಟ್ಟಣಗಳ 4,340 ಶಾಲೆಗಳಲ್ಲಿ ಸ್ವಚ್ಛಗ್ರಹ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿದ್ದು, ಇದರಡಿಯಲ್ಲಿ 4,532 ಶಿಕ್ಷಕರಿಗೆ ತಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಗೀತಾಂಜಲಿ ಸುವರ್ಣ, ರೇಷ್ಮಾ ಉದಯ ಶೆಟ್ಟಿ, ಶಿಲ್ಪಾಜಿ. ಸುವರ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ, ಉಡುಪಿ ವಲಯ ಶಿಕ್ಷಣಾಧಿಕಾರಿ ಉಮಾ ಪಿ. ಮಾತನಾಡಿದರು.

ಅದಾನಿ ಯುಪಿಸಿಎಲ್‌ನ ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ ಉಪಸ್ಥಿತರಿ ದ್ದರು. ಏಜಿಎಂ ಆದ ಗಿರೀಶ್ ನಾವಡ ವಂದಿಸಿದರು. ರಾಜೇಂದ್ರ ಕುಮಾರ್ ಇನ್ನಾ ಕಾರ್ಯಕ್ರಮ ನಿರೂಪಿಸಿದರು. ಅದಾನಿ ೌಂಡೇಶನ್‌ನ ಯೋಜನಾಧಿ ಕಾರಿಗಳಾದ ಜಿಗ್ನೇಶ್ ಮತ್ತು ವಿನೀತ್ ಅಂಚನ್ ತರಬೇತಿ ನೀಡಿದರು. ಜಿಲ್ಲೆಯ ಒಟ್ಟು 50 ಶಾಲೆಯ ಶಿಕ್ಷಕರು ತರಬೇತಿ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News