×
Ad

‘ಮೇಲ್ತೆನೆ’ ಸದಸ್ಯರ ಕುಟುಂಬ ಸಮ್ಮಿಲನ-ಕವಿಗೋಷ್ಠಿ

Update: 2019-01-02 20:08 IST

ಮಂಗಳೂರು, ಜ. 2: ದೇರಳಕಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ‘ಮೇಲ್ತೆನೆ’ ಸಂಘಟನೆಯ ಸದಸ್ಯರ ಕುಟುಂಬ ಸಮ್ಮಿಲನ ಮತ್ತು ಕವಿಗೋಷ್ಠಿಯು ರವಿವಾರ ಮಡಿಕೇರಿಯಲ್ಲಿ ಜರುಗಿತು.

ಕೊಡಗು ಜಿಲ್ಲಾ ಬ್ಯಾರೀಸ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಸಂಶುದ್ದೀನ್ ಮಡಿಕೇರಿಯ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಮೇಲ್ತೆನೆಯ ಮೇಲ್ತೆನೆಯ ಮಾಜಿ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ, ಕೋಶಾಧಿಕಾರಿ ಇಸ್ಮಾಯೀಲ್ ಟಿ., ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ, ಕವಿ ಅಬ್ದುಲ್ಲಾ ಮಡಿಕೇರಿ ಕವನ ವಾಚಿಸಿದರು.

ಬ್ಯಾರಿ ಅಕಾಡಮಿಯ ಸದಸ್ಯ ಶರೀಫ್ ಎಸ್.ಎಂ., ಬ್ಯಾರೀಸ್ ವೆಲ್ಫೇರ್ ಟ್ರಸ್ಟ್‌ನ ಟ್ರಸ್ಟಿ ಕಲೀಂ, ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ನೂತನ ಅಧ್ಯಕ್ಷ ಹಂಝ ಮಲಾರ್, ಉಪಾಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್ ಉಪಸ್ಥಿತರಿದ್ದರು. ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

‘ಮೇಲ್ತೆನೆ’ ಸದಸ್ಯರ ಕುಟುಂಬ ಸಮ್ಮಿಲನದಲ್ಲಿ ಏರ್ಪಡಿಸಲಾದ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದಲ್ಲಿ ನಫೀಸಾ ಮತ್ತು ಸಕೀನಾ, ಮಕ್ಕಳ ವಿಭಾಗದಲ್ಲಿ ಝಾಕಿಯಾ ಕಿನ್ಯ, ಶೋಹಿಬಾ ಕಲ್ಕಟ್ಟ, ಮಹಿಳೆ ಮತ್ತು ಮಕ್ಕಳ ಜಂಟಿ ವಿಭಾಗದಲ್ಲಿ ಝಾಕಿಯಾ ಕಿನ್ಯ, ಶೋಫಿಯಾ ಹಾಗೂ ಸದಸ್ಯರ ವಿಭಾಗದಲ್ಲಿ ಬಶೀರ್ ಕಿನ್ಯ, ಇಸ್ಮಾಯೀಲ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News