ಪ್ರವಾದಿಯನ್ನು ನಿಂದಿಸಿದ ಪ್ರಕರಣ: ಬಿ.ಸಿ.ರೋಡಿನ ಮಿನಿವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟನೆ
Update: 2019-01-02 22:33 IST
ಬಂಟ್ವಾಳ, ಜ. 2: ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಪ್ರವಾದಿ ಪೈಗಂಬರ್ ರನ್ನು ನಿಂದಿಸಲಾದ ಪ್ರಕರಣವನ್ನು ಖಂಡಿಸಿ ಗೂಡಿನಬಳಿ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡ ಭಾನುಚಂದ್ರ ಕೃಷ್ಣಾಪುರ, ಗೂಡಿನಬಳಿ ಜುಮಾ ಮಸೀದಿಯ ರಿಯಾಝ್ ರಹ್ಮಾನಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಎಚ್.ಅಬೂಬಕರ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೈಲಾರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪ್ರಮುಖರಾದ ಇಸಾಕ್ ಮಿತ್ತೂರು, ಕರೀಂ ಬೊಳ್ಳಾಯಿ, ಇಬ್ರಾಹಿಂ ಮಂಚಿ, ಜಿ.ಕೆ.ಬಶೀರ್, ಲತೀಫ್ ಖಾನ್ ಹಾಜರಿದ್ದರು.
ಫಿರೋಝ್ ಖಾನ್ ಸ್ವಾಗತಿಸಿ, ಇಸ್ರಾರ್ ಗೂಡಿನಬಳಿ ವಂದಿಸಿದರು. ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಂಟ್ವಾಳ ತಹಶೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ನೀಡಲಾಯಿತು.