×
Ad

ಇಂಡಿಗೊ ವಿಮಾನದಲ್ಲಿ ಹೊಗೆ

Update: 2019-01-02 22:33 IST

ಅಹ್ಮದಾಬಾದ್, ಜ. 2: ಸಂಚಾರದ ಸಂದರ್ಭ ಕಾಕ್‌ಪಿಟ್ ಹಾಗೂ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಬಳಿಕ ಹೊಸದಿಲ್ಲಿಯಿಂದ ಇಲ್ಲಿಗೆ ಆಗಮಿಸುತ್ತಿದ್ದ ವಿಮಾನವನ್ನು ಇಲ್ಲಿ ಬುಧವಾರ ಮೊದಲ ಆದ್ಯತೆಯಲ್ಲಿ ಇಳಿಸಲಾಯಿತು. ಪೈಲೆಟ್ ಪ್ಯಾನ್ ಪ್ಯಾನ್ ಕರೆ ನೀಡಿದರು ಹಾಗೂ ಭೂಸ್ಪರ್ಶಕ್ಕೆ ಮೊದಲ ಆದ್ಯತೆ ನೀಡುವಂತೆ ಅಹ್ಮದಾಬಾದ್ ಎಟಿಸಿಯನ್ನು ಕೋರಿದರು ಎಂದು ಮೂಲಗಳು ತಿಳಿಸಿವೆ.

ಕಡಿಮೆ ತುರ್ತು ಇದ್ದ ಸಂದರ್ಭ ಪ್ಯಾನ್-ಪ್ಯಾನ್ ಕರೆ ನೀಡಲಾಗುತ್ತದೆ. ಆದರೆ, ವಾಯು ಸಂಚಾರ ನಿಯಂತ್ರಣವನ್ನು ಎಚ್ಚರಗೊಳಿಸುವುದು ಈ ಕರೆಯ ಉದ್ದೇಶ ಆಗಿರುತ್ತದೆ. ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವಿಮಾನ ಬೆಳಗ್ಗೆ 7.42ಕ್ಕೆ ಹಾರಾಟ ಆರಂಭಿಸಿತ್ತು. ಅಹ್ಮದಾಬಾದ್‌ನತ್ತ ಈ ವಿಮಾನ ಆಗಮಿಸುತ್ತಿರುವ ಸಂದರ್ಭ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News