ಫರಂಗಿಪೇಟೆ: ಮದೀನ ಮುನವ್ವರ ಹಜ್, ಉಮ್ರಾ ಟೂರ್ ಆ್ಯಂಡ್ ಟ್ರಾವಲ್ಸ್ ಕಚೇರಿ ಉದ್ಘಾಟನೆ

Update: 2019-01-02 17:42 GMT

ಫರಂಗಿಪೇಟೆ, ಡಿ. 2: ಫರಂಗಿಪೇಟೆಯಲ್ಲಿ ಮಂಜೇಶ್ವರದ ಕೊಂಬಂಕುದಿ ಇಬ್ರಾಹೀಂ ಹಾಜಿ ಅವರ ಮಾಲಕತ್ವದಲ್ಲಿ ಆರಂಭಿಸಲಾದ ಮದೀನತ್ತುಲ್ ಮನವ್ವರ ಹಜ್, ಉಮ್ರಾ ಟೂರ್ ಆ್ಯಂಡ್ ಟ್ರಾವಲ್ಸ್ ಸರ್ವಿಸ್ ಕಚೇರಿಯನ್ನು ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಜಿಫ್ರೀ ಮುತ್ತುಕೋಯ ತಂಙಲ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಂಸ್ಥೆಗೆ ಬರುವ ಲಾಭದಿಂದ ಬಡ ಉಸ್ತಾದರಿಗೆ ಉಮ್ರಾ ಭಾಗ್ಯ ಒದಗಿಸುವ ಮಾಲಕರ ನಿರ್ಧಾರ ಮೆಚ್ಚತಕ್ಕದ್ದಾಗಿದೆ ಎಂದರು. ಮಿತ್ತಬೈಲು ಜಬ್ಬಾರ್ ಉಸ್ತಾದ್ ಉಮ್ರಾ ಯಾತ್ರೆಗೆ ಈ ಗ್ರೂಪನ್ನು ಆಯ್ಕೆ ಮಾಡಿದ್ದು ಮದೀನ ಮುನವ್ವರ ಸಂಸ್ಥಗೆ ದಕ್ಕಿದ ಅಂಗೀಕಾರವಾಗಿದೆ ಎಂದು ಹೇಳಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಭೇಟಿ ನೀಡಿ ಹಜ್, ಉಮ್ರಾ ಯಾತ್ರಾರ್ಥಿಗಳ ಸೇವಾ ರಂಗದಲ್ಲಿ ಮುಂಚೂಣಿಯಲ್ಲಿರುವ ಮದೀನ ಮನವ್ವರ ಟ್ರಾವಲ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಪ್ರಾರ್ಥನೆಯ ಮೂಲಕ ಶುಭ ಹಾರೈಸಿದರು.

ಹಜ್, ಉಮ್ರಾ ಸೇವಾ ರಂಗದಲ್ಲಿ ದೀರ್ಘ ಕಾಲದ ಅನುಭವ ಮತ್ತು ಮದೀನ ಇಮಾಮರೊಂದಿಗೆ ಆಪ್ತ ಸಂಬಂಧ ಇರುವ ಇಬ್ರಾಹೀಂ ಹಾಜಿಯ ಮೇಲ್ನೋಟದಲ್ಲಿರುವ ಹಜ್, ಉಮ್ರಾ ಸೇವೆ ಸಾರ್ವಜನಿಕರಿಗೆ ಲಭ್ಯವಿದ್ದು ಇದರ ಸದುಪಯೋಗ ಪಡೆಯುವಂತೆ ಗಣ್ಯರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಚೆಂಗಳ ಅಬ್ದುಲ್ಲಾ ಪೈಝಿ, ಯಸ್ ಬಿ ಮುಹಮ್ಮದ್ ದಾರಿಮಿ ಮುಲ್ಕಿ, ಚೊಕ್ಕಬೆಟ್ಟು ಅಬ್ದುಲ್ ಅಝೀಝ್ ದಾರಿಮಿ, ಇಬ್ರಾಹೀಂ ಬಾಖವಿ ಕೆಸಿ ರೋಡು, ಕೆ.ಬಿ ದಾರಿಮಿ, ಫರಂಗಿಪೇಟೆ ಖತೀಬ್ ಅಬ್ಬಾಸ್ ದಾರಿಮಿ, ಶೈಖ್ ಮುಹಮ್ಮದ್ ಇರ್ಫಾನಿ, ಅಬೂಸ್ವಾಲಿಹ್ ಪೈಝಿ, ಕೆ. ಖಲೀಲುರ್ರಹ್ಮಾನ್ ದಾರಿಮಿ ಮಾರಿಪಲ್ಲ, ಇರ್ಷಾದ್ ದಾರಿಮಿ ಮಿತ್ತಬೈಲ್, ಇಸ್ಮಾಯಿಲ್ ಯಮಾನಿ, ಲತೀಫ್ ಪೈಝಿ ತುಂಬೆ, ರಫೀಕ್ ಸಅದಿ ಪೆರಿಮಾರ್, ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಇರ್ಷಾದ್ ದಾರಿಮಿ ಬಾಂಬಿಲ, ಸ್ವಾದಿಕ್ ಅಝ್ಹರಿ ಕೂಪ್ಪ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ ಹಾಜಿ, ಜಿಲ್ಲಾ ಪಂ. ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮುಸ್ತಫಾ ಮೆಲ್ಮನೆ, ಸಲಾಂ ಮಲ್ಲಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. 

ಮಾಹಿನ್ ದಾರಿಮಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News