ಬಂಟ್ವಾಳ: ಕೇರಳ ಸರಕಾರಿ ಬಸ್ ಗೆ ಕಲ್ಲು ತೂರಾಟ
Update: 2019-01-02 23:17 IST
ಬಂಟ್ವಾಳ, ಜ. 2: ಬೈಕ್ ನಲ್ಲಿ ಬಂದ ಅಪರಿಚಿತರು ಕೇರಳ ಸರಕಾರಿ ಬಸ್ ಗೆ ಕಲ್ಲು ಹೊಡೆದು ಪರಾರಿಯಾದ ಘಟನೆ ಕೇಪು ಕಲ್ಲಂಗಳ ಆಶ್ರಮ ಶಾಲೆಯ ಸಮೀಪ ಬುಧವಾರ ನಡೆದಿದೆ.
ಪುತ್ತೂರು - ಕಾಸರಗೋಡು ಸಂಚರಿಸುವ ಬಸ್ ವಿಟ್ಲ ಕಡೆಯಿಂದ ಪೆರ್ಲ ಕಡೆಗೆ ಹೋಗುವಾಗ ಈ ಘಟನೆ ನಡೆದಿದೆ. ಕೇಪು ದ್ವಾರದಿಂದ ಬಸ್ ಅನ್ನು ಹಿಂದಿಕ್ಕಿದ ಬೈಕ್, ಆಶ್ರಮ ಶಾಲೆಯ ಸಮೀಪ ಏಕಾಏಕಿ ಬಸ್ ನ ಮೇಲೆ ಕಲ್ಲು ತೂರಿ ಬೈಕ್ ನಲ್ಲಿ ಪರಾರಿಯಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೈಕ್ ಗೆ ಬದಿಕೊಡವ ವಿಚಾರದಲ್ಲಿ ಕಲ್ಲು ತೂರಾಟ ಮಾಡಲಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.