ಹರತಾಳ: ಕುಂಬಳೆಯಲ್ಲಿ ರಸ್ತೆ ತಡೆಯಿಂದ ಅಪಘಾತಕ್ಕೀಡಾದ ಸ್ಕೂಟರ್; ದಂಪತಿಗೆ ಗಂಭೀರ ಗಾಯ
Update: 2019-01-03 11:36 IST
ಕಾಸರಗೋಡು, ಜ.3: ಬದಿಯಡ್ಕ- ಕುಂಬಳೆ ರಸ್ತೆಯ ಕನ್ಯಪ್ಪಾಡಿಯಲ್ಲಿ ಹರತಾಳ ಬೆಂಬಲಿಗರು ರಸ್ತೆಗಡ್ಡವಾಗಿ ಹಾಕಿದ್ದ ಕಲ್ಲುಗಳಿಗೆ ಸ್ಕೂಟರ್ ಬಡಿದು ಮಗುಚಿ ಬಿದ್ದ ಪರಿಣಾಮ ದಂಪತಿ ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ನಡೆದಿದೆ.
ಗಾಯಗೊಂಡ ಕನ್ಯಪ್ಪಾಡಿಯ ಐತಪ್ಪ (48) ಮತ್ತು ಸುಶೀಲಾ (36) ಎಂಬವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಈ ನಡುವೆ ಬದಿಯಡ್ಕ ಕಡಂಬಳ ಡಿ.ವೈ.ಎಫ್.ಐ. ಘಟಕ ಕಚೇರಿಗೆ ಕರಿ ಆಯಿಲ್ ಎರಚಿದ ಘಟನೆ ಇಂದು ಮುಂಜಾನೆ ನಡೆದಿದೆ. ಕೃತ್ಯ ಗಮನಕ್ಕೆ ಬಂದು ಸ್ಥಳೀಯರು ಧಾವಿಸಿ ಬರುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾದರು. ಬದಿಯಡ್ಕ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.