×
Ad

ಪುನರುಜ್ಜೀವನಗೊಂಡ ಮದ್ಮಲ್‌ಕೆರೆ: ಜ.6ಕ್ಕೆ ಲೋಕಾರ್ಪಣೆ

Update: 2019-01-03 18:36 IST

ಉಡುಪಿ, ಜ.3: ಹಾವುಂಜೆ ಗ್ರಾಮದ ಕೀಳಿಂಜೆಯಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮದ್ಮಲ್ ಕೆರೆಯನ್ನು ಜ.6ರಂದು ಲೋಕಾರ್ಪಣೆಗೊಳಿಸಲಾಗುವುದು.

ಎರಡು ವರ್ಷಗಳ ಹಿಂದೆ ಹಾವಂಜೆ ಗ್ರಾಮದ ನೀರಿನ ಬವಣೆಯನ್ನು ತಪ್ಪಿಸಲು ಅಲ್ಲಿನ ಮದ್ಮಲ್ ಕೆರೆಯನ್ನು ಪುನರುಜ್ಜೀವನಗೊಳಿಸುವಂತೆ ಗ್ರಾಮಸ್ಥರ ಪರವಾಗಿ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ ಹಾಗು ಗಣೇಶ್ ರಾಜ್ ಸರಳೆಬೆಟ್ಟು, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ಗೆ ಮನವಿ ಮಾಡಿದ್ದರು.

ಮನವಿಗೆ ತಕ್ಷಣ ಸ್ಪಂಧಿಸಿದ ಪ್ರಮೋದ್ ಮದ್ವರಾಜ್, ಸಣ್ಣ ನೀರಾವರಿ ಇಲಾಖೆಯಿಂದ ಹಣ ಬಿಡುಗಡೆಗೊಳಿಸಿದ್ದರು. ಇದೀಗ ಕೆರೆಯ ಪುನರುಜ್ಜೀವನ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಇದೇ ಜ.6ರಂದು ಬೆಳಗ್ಗೆ 9 ಕ್ಕೆ ಕೀಳಿಂಜೆಯಲ್ಲಿ ಸುಸಜ್ಜಿತವಾದ ಮದ್ಮಲ್ ಕೆರೆ ಲೋಕಾರ್ಪಣೆಗೊಳ್ಳಲಿದೆ ಎಂದು ಗಣೇಶ್‌ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News