ಶತದಿನ ಪೂರೈಸಿದ ಫೊಲೀಸ್ ಫೋನ್‌ಇನ್: ಜ.4ರಂದು ವಿಶೇಷ ಸಂವಾದ ಸನ್ಮಾನ ಕಾರ್ಯಕ್ರಮ
ಮಂಗಳೂರು, ಜ.3: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ನಡೆಯುವ ಫೋನ್‌ಇನ್ ಕಾರ್ಯಕ್ರಮಕ್ಕೆ ಜ.4ರಂದು ಶತದಿನವಾಗಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಸಂವಾದ, ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ದೂರುಗಳನ್ನು ಆಲಿಸುವ ದೃಷ್ಟಿಯಿಂದ ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ 2016 ಆ.5ರಿಂದ ಶುಕ್ರವಾರ ಪೊಲೀಸ್ ಕಮಿಷನರ್ ಫೋನ್-ಇನ್ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ 10ರಿಂದ 11ರವರೆಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು 2220801, 2220830ಗೆ ಕರೆ ಮಾಡಿ ಸಮಸ್ಯೆಗಳನ್ನು ಆಲಿಸಬಹುದಾಗಿದೆ. ಇಂದು ಕೂಡ ಫೋನ್-ಇನ್ ಕಾರ್ಯಕ್ರಮ ಯಥಾವತ್ತಾಗಿ ನಡೆಯಲಿದೆ.
ಸಂವಾದ ಕಾರ್ಯಕ್ರಮ: ಬೆಳಗ್ಗೆ 11ರಿಂದ 12ಗಂಟೆಯವರೆಗೆ ಮನಪಾ ಕಮಿಷನರ್ ಮತ್ತು ಪೊಲೀಸ್ ಕಮಿಷನರ್, ಇಲಾಖೆ ಅಧಿಕಾರಿಗಳ ಜತೆ ಪತ್ರಕರ್ತರ ಸಂವಾದ ನಡೆಯಲಿದೆ.
ಅಭಿನಂದನೆ: ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಈ ಸಂದರ್ಭ ಅಭಿನಂದನೆ ನಡೆಯಲಿದೆ. ಡ್ರಾಯಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೂ ಈ ಸಂದರ್ಭ ಬಹುಮಾನ ವಿತರಣೆ ನಡೆಯಲಿದೆ ಎಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.