×
Ad

ಕಿಡಿಗೇಡಿಗಳಿಂದ ಸಿಪಿಐ ಬಂಟ್ವಾಳ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣ: ರಮಾನಾಥ ರೈ ಖಂಡನೆ

Update: 2019-01-03 21:45 IST

ಬಂಟ್ವಾಳ, ಜ. 3: ಸಿಪಿಐ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಯ ಸುದ್ದಿ ತಿಳಿದ ಮಾಜಿ ಸಚಿವ ರಮಾನಾಥ ರೈ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಖಂಡಿಸಿದರು.

ಶಾಂತಿ ಸುವ್ಯವಸ್ಥೆಯನ್ನು ಹದಗೆಡಲು ಯತ್ನಿಸುವುದು ಸರಿಯಲ್ಲ. ಪೊಲೀಸರು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿಕುಂದರ್, ಸಂಪತ್ ಕುಮಾರ್ ರೈ, ಪುರಸಭಾ ಸದಸ್ಯ ಗಂಗಾಧರ್, ಸಿಪಿಐ ಮುಖಂಡ ಬಾಬು ಭಂಡಾರಿ ಮೊದಲಾದವರು ಭೇಟಿ ನೀಡಿದರು.

ಖಂಡನೆ: ಪುರಸಭಾ ಸದಸ್ಯ ಮುನೀಶ್ ಅಲಿ, ಹೋರಾಟಗಾರ ಪ್ರಭಾಕರ ದೈವಗುಡ್ಡೆ, ಸಿಪಿಎಂ ಕಾರ್ಯದರ್ಶಿ ರಾಮಣ್ಣ ವಿಟ್ಲ, ವರದರಾಜು ಅವರು ಘಟನೆಯನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News