​ಅಕ್ರಮ ಪಡಿತರ ಅಕ್ಕಿ ಸಾಗಾಟ: ಇಬ್ಬರ ಬಂಧನ

Update: 2019-01-03 16:29 GMT

ಕೋಟ, ಜ.3: ಗಿಳಿಯಾರು ಗ್ರಾಮದ ದೇವಾಡಿಗರಬೆಟ್ಟು ಎಂಬಲ್ಲಿ ಜ. 2 ರಂದು ಬೆಳಗ್ಗೆ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ವಾಹನದಲ್ಲಿ ಮನೆಮನೆಗಳಿಂದ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗೆ ಬಂದ ದೂರಿನ ಹಿನ್ನೆಲೆ ಯಲ್ಲಿ ಉಡುಪಿಯ ಆಹಾರ ನಿರೀಕ್ಷಕಿ ಪಾರ್ವತಿ, ಆಹಾರ ಉಪನಿರ್ದೇಶಕರು ಹಾಗೂ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ವಾಹನ ಚಾಲಕ ಉಮ್ಮರ್ ಫಾರೂಕ್ ಮತ್ತು ಸಹಾಯಕ ಮೊಹಿದ್ದೀನ್ ಬಂಧಿತ ಆರೋಪಿಗಳು. ಇವರಿಂದ 9394 ರೂ. ಮೌಲ್ಯದ 16 ಬಿಳಿ ಪ್ಲಾಸ್ಟಿಕ್ ಚೀಲದಲ್ಲಿದ್ದ ಒಟ್ಟು 626.270 ಕೆ.ಜಿ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News