ಅಕ್ರಮ ಕಸಾಯಿಖಾನೆ: ಐವರ ಬಂಧನ
Update: 2019-01-03 22:07 IST
ಕಾರ್ಕಳ, ಜ.3: ನಿಟ್ಟೆ ಗ್ರಾಮದ ಅರ್ಬಿ ಪಾಲ್ಸ್ ಬಳಿಯ ಸರಕಾರಿ ಹಾಡಿಯಲ್ಲಿ ಇಂದು ಬೆಳಗಿನ ಜಾವ ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಐದು ಮಂದಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ನಿಟ್ಟೆ ಅಂಬಡೆಕಲ್ಲುವಿನ ಸೋಮನಾಥ್(33), ಶಂಕರ(38), ಪ್ರಶಾಂತ್ (28) ಪರಪ್ಪಾಡಿ ಕ್ರಾಸ್‌ನ ಪ್ರಸನ್ನ ಪೂಜಾರಿ(21), ಬೋರ್ಗಲ್ಗುಡ್ಡೆಯ ಮಹಮ್ಮದ್ ಅಶ್ರಫ್(38) ಬಂಧಿತ ಆರೋಪಿಗಳು. ಇವರಿಂದ 10 ಸಾವಿರ ರೂ. ಮೌಲ್ಯದ ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.