×
Ad

ಮಲೆಗಳಲ್ಲಿ ಮದುಮಗಳು-50 ಕುರಿತು ಜ.5ರಂದು ವಿಚಾರ ಸಂಕಿರಣ

Update: 2019-01-03 22:08 IST

ಉಡುಪಿ, ಜ.3: ಶಿವಮೊಗ್ಗದ ಲೋಹಿಯಾ ಜನ್ಮ ಶತಾಬ್ದಿ ಪ್ರತಿಷ್ಠಾನ ಹಾಗೂ ಉಡುಪಿಯ ರಥಬೀದಿ ಗೆಳೆಯರು ಇವರ ಜಂಟಿ ಆಶ್ರಯದಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು-50 ಕುರಿತ ವಿಚಾರ ಸಂಕಿರಣ ಜ.5ರ ಶನಿವಾರ ಉಡುಪಿಯಲ್ಲಿ ನಡೆಯಲಿದೆ.

ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯುವ ಈ ವಿಚಾರಸಂಕಿರಣವನ್ನು ಹಿರಿಯ ವಿದ್ವಾಂಸರಾದ ಡಾ.ಬಿ.ಎ. ವಿವೇಕ ರೈ ಉದ್ಘಾಟಿಸಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಚಿಂತಕ ಡಿ.ಎಸ್. ನಾಗಭೂಷಣ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.

ಉಡುಪಿಯ ಜಿ.ರಾಜಶೇಖರ್, ಮಂಗಳೂರಿನ ಡಾ.ವಾಸುದೇವ ಬೆಳ್ಳೆ, ಪುತ್ತೂರಿನ ಲಕ್ಷ್ಮೀಶ ತೋಳ್ಪಾಡಿ ವಿಚಾರ ಮಂಡಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಪ್ರಸಿದ್ಧ ಕಾದಂಬರಿಗೆ 50 ತುಂಬಿದ ಪ್ರಯುಕ್ತ ಹಮ್ಮಿಕೊಳ್ಳಲಾದ ಈ ವಿಚಾರಸಂಕಿರಣದಲ್ಲಿ ಸಾಹಿತ್ಯಾಸಕ್ತರು ಭಾಗವಹಿಸುವಂತೆ ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News