×
Ad

ಮೀನುಗಾರರ ನಾಪತ್ತೆ: ಶೋಭಾರಿಂದ ನಿತಿನ್ ಗಡ್ಕರಿ ಭೇಟಿ

Update: 2019-01-03 22:12 IST

ಉಡುಪಿ, ಜ.3: ಸುವರ್ಣ ತ್ರಿಭುಜ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರ ಪತ್ತೆ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೊಸದಿಲ್ಲಿಯಲ್ಲಿ ಇಂದು ಕೇಂದ್ರ ನೌಕೋದ್ಯಮ, ಜಲಸಂಪನ್ಮೂಲ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು.

ನಾಪತ್ತೆಯಾಗಿರುವ ಬೋಟಿನಿಂದ ವಯರ್‌ಲೆಸ್ ಮೂಲಕ ಬಂದಿರುವ ಕೊನೆಯ ಸಂದೇಶ ಮಹಾರಾಷ್ಟ್ರದ ಸಿಂಧುದುರ್ಗ ಪ್ರಾಂತ್ಯದಿಂದ ಬಂದಿರುವ ಹಿನ್ನಲೆಯಲ್ಲಿ ಆ ಭಾಗದಲ್ಲಿ ಪತ್ತೆ ಕಾರ್ಯ ಇನ್ನಷ್ಟು ಚುರುಕುಗೊಳಿಸಲು ಮಹಾರಾಷ್ಟ್ರ ಸರಕಾರದ ಮೇಲೆ ವಿಶೇಷ ಒತ್ತಡ ಹೇರುವಂತೆ ಅವರು ಮಹಾರಾಷ್ಟ್ರ ದವರೇ ಆದ ಕೇಂದ್ರ ಸಚಿವರನ್ನು ಒತ್ತಾಯಿಸಿದರು.

ಮಹಾರಾಷ್ಟ್ರ ಪೋಲೀಸ್ ಇಲಾಖೆಯ ವಿಶೇಷ ಐಜಿ ಮಿಲಿಂದ್ ಬರಾಂಬೆ ಪತ್ತೆ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಪತ್ತೆ ಕಾರ್ಯ ಮುಂದುವರಿದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News